ವಿಜಯಪುರ, ಮಾ.21-ಕೇಂದ್ರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ನೀಡದಿದ್ದರೆ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧಮ ಎಂದು ಸುಪ್ರೀಂಕೋರ್ಟ್ ಮೂಲಕವೇ ಸರ್ಟಿಫಿಕೇಟ್ ಪಡೆದುಕೊಳ್ಳುತ್ತೇವೆ ಎಂದರು.
ಜೈನ ಸಮಾಜದವರು ಸುಪ್ರೀಂಕೋರ್ಟ್ ನಿರ್ದೇಶನ ಪಡೆದುಕೊಂಡೇ ಪ್ರತ್ಯೇಕ ಧರ್ಮ ಮಾನ್ಯತೆ ಪಡೆದುಕೊಂಡಿದ್ದಾರೆ ಎಂದರು.
ಬ್ರಾಹ್ಮಣರೂ ಸಹ ಪ್ರತ್ಯೇಕ ಧರ್ಮ ಪಡೆದುಕೊಳ್ಳಲಿ ಅದರಲ್ಲಿ ತಪ್ಪೇನಿಲ್ಲ ಎಂದ ಅವರು, ಹಿಂದೂ ಧರ್ಮದಿಂದ ಹೇಗೆ ವಿಭಿನ್ನ ಎನ್ನುವುದನ್ನು ಸಾಬೀತುಪಡಿಸಬೇಕಾಗುತ್ತದೆ. ದಾಖಲೆಗಳನ್ನು ಸಲ್ಲಿಸಿ ಎಂದರು.