ಆಧಾರ್‍ಕಾರ್ಡ್ ವಿವಿಧ ಯೋಜನೆಗಳಿಗೆ ಜೋಡಿಸುವ ವಿಷಯದಲ್ಲಿ ಉದ್ಭವಿಸಿರುವ ಗೊಂದಲ ನಿವಾರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ:

ನವದೆಹಲಿ, ಮಾ.21-ಆಧಾರ್‍ಕಾರ್ಡ್ ವಿವಿಧ ಯೋಜನೆಗಳಿಗೆ ಜೋಡಿಸುವ ವಿಷಯದಲ್ಲಿ ಉದ್ಭವಿಸಿರುವ ಗೊಂದಲ ನಿವಾರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಈ ಸಂಬಂಧ ಸುಪ್ರೀಂಕೋರ್ಟ್‍ಗೆ ಇಂದು ಮನವಿ ಸಲ್ಲಿಸಿರುವ ಸರ್ಕಾರ, ನ್ಯಾಯಾಲಯದಲ್ಲಿಯೇ ಆಧಾರ್ ಯೋಜನೆ ಕುರಿತು ಸ್ಪಷ್ಟವಾದ ಪವರ್ ಪಾಯಿಂಟ್ (ಪಿಪಿಟಿ) ಪ್ರಾತ್ಯಕ್ಷಿಕೆ ಪ್ರಸ್ತುತ ಪಡಿಸಲು ಅವಕಾಶ ನೀಡಬೇಕು. ಇದರಿಂದ ಈ ಬಗ್ಗೆ ಎದ್ದಿರುವ ಗೊಂದಲ ಅನುಮಾನಗಳು ನಿವಾರಣೆಯಾಗಲು ಸಹಕಾರಿಯಾಗುತ್ತದೆ ಎಂದು ಕೋರಿದೆ.
ಸರ್ಕಾರದ ಮನವಿಗೆ ಸ್ಪಂದಿಸಿದ ಮುಖ್ಯ ನ್ಯಾ.ದೀಪಕ್ ಮಿಶ್ರಾ, ಈ ವಿಷಯದ ಬಗ್ಗೆ ಸಂವಿಧಾನ ಪೀಠದ ಇತರ ನ್ಯಾಯಾಧೀಶರೊಂದಿಗೆ ಚರ್ಚಿಸಿ ದಿನಾಂಕ ನಿಗದಿಗೊಳಿಸಲಾಗುವುದು. ಆ ದಿನದಂದು ಕೇಂದ್ರ ಸರ್ಕಾರ ಪ್ರಾತ್ಯಕ್ಷಿಕೆ ಪ್ರಸ್ತುತ ಪಡಿಸಬಹುದು ಎಂದು ತಿಳಿಸಿದೆ.
ಆಧಾರ್‍ಕಾರ್ಡ್ ಬಗ್ಗೆ ಈಗಾಗಲೇ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಈ ಕುರಿತು ಕಣ್ಗಾವಲು, ಅಂಕಿಅಂಶ, ಭದ್ರತೆ ಮೊದಲಾದ ತಾಂತ್ರಿಕ ವಿಷಯಗಳ ಬಗ್ಗೆ ಚರ್ಚೆಯಾಗುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ