ಬೆಂಗಳೂರು, ಮಾ.21- ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಇದೇ 23ರಿಂದ ಏ.6ರವರೆಗೆ ನಡೆಯಲಿದ್ದು, ದಾಖಲೆಯ ಒಟ್ಟು 8,54,424 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಹೊಸದಾಗಿ ಪರೀಕ್ಷೆ ಬರೆಯುವವರು: ಬಾಲಕರು-3,88,701, ಬಾಲಕಿಯರು-3,72,271, ಒಟ್ಟು-7,60,972. ಪುನರಾವರ್ತಿತ ಅಭ್ಯರ್ಥಿಗಳು: ಬಾಲಕರು-49,294, ಬಾಲಕಿಯರು-20,959, ಒಟ್ಟು 70,253. ಖಾಸಗಿ ಅಭ್ಯರ್ಥಿಗಳು: ಬಾಲಕರು- 18,108, ಬಾಲಕಿಯರು-5,091, ಒಟ್ಟು-23,199. ಒಟ್ಟಾರೆ 8,54,424 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ.
ಮೊದಲ ಬಾರಿಗೆ ಎಸ್.ಎ.ಟಿ.ಎಸ್ ಮೂಲಕ ಆನ್ಲೈನ್ನಲ್ಲಿ ಸಂಗ್ರಹಿಸಲಾದ ಮಾಹಿತಿಯಂತೆ ಪರೀಕ್ಷಾರ್ಥಿಗಳ ಯಾದಿಯನ್ನು ಸಿದ್ದಪಡಿಸಲಾಗಿದೆ. ರಾಜ್ಯಾದ್ಯಂತ 14385 ಶಾಲೆಗಳಿದ್ದು, 2817 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಇವುಗಳ ಪೈಕಿ 1011 ಕ್ಲಸ್ಟರ್ ಕೇಂದ್ರಗಳು ಹಾಗೂ 1807 ನಾನ್ ಕ್ಲಸ್ಟರ್ ಕೇಂದ್ರಗಳಿವೆ. 45 ಕೇಂದ್ರಗಳನ್ನು ಸೂಕ್ಷ್ಮ ಹಾಗೂ 23 ಕೇಂದ್ರಗಳನ್ನು ಅತೀ ಸೂಕ್ಷ್ಮ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ.
ಮುಖ್ಯಶಿಕ್ಷಕರು ಪ್ರವೇಶ ಪತ್ರಗಳನ್ನು ಕೂಡ ಆನ್ಲೈನ್ನಲ್ಲಿ ಶಾಲಾ ಲಾಗಿನ್ ಗೆ ಅಪ್ಲೋಡ್ ಮಾಡಿ , ಡೌನ್ಲೋಡ್ ಮಾಡಿ ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ. ಪರೀಕ್ಷೆಗಳನ್ನು ಸುವ್ಯಸ್ಥಿತವಾಗಿ ನಡೆಸಲು 21 ರಾಜ್ಯ ಹಾಗೂ ವಿಭಾಗೀಯ ಮಟ್ಟದ ಅಧಿಕಾರಿಗಳನ್ನು ಜಿಲ್ಲಾ ವೀಕ್ಷಕರಾಗಿ ನೇಮಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಾಲ್ಲೂಕು, ಜಿಲ್ಲಾ ಮಟ್ಟದ 2043 ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
406 ಡಯಟ್ ಉಪನ್ಯಾಸಕರು, ಹಿರಿಯ ಉಪನ್ಯಾಸಕರನ್ನು ಜಾಗೃತದಳದ ಸದಸ್ಯರನ್ನಾಗಿ ನೇಮಿಸಲಾಗಿದೆ. 34 ಡಯಟ್ ಪ್ರಾಂಶುಪಾಲರನ್ನು ಕರ್ತವ್ಯ ನಿರ್ವಹಿಸುವ ಜಿಲ್ಲೆಯಲ್ಲಿಯೇ ಜಿಲ್ಲಾ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. 306 ಅಧಿಕಾರಿಗಳನ್ನೊಳಗೊಂಡ ಜಿಲ್ಲಾ ಉಪನಿರ್ದೇಶಕರು, ಶಿಕ್ಷಣಾಧಿಕಾರಿಗಳು ಹಾಗೂ ಉಪಯೋಜನಾ ಸಮನ್ವಯಾಧಿಕಾರಿಗಳ ನೇತೃತ್ವದಲ್ಲಿ ರಚಿಸಿರುವ ಜಿಲ್ಲಾ ವೀಕ್ಷಣಾ ದಳವು ಕಾರ್ಯನಿರತವಾಗಿರುತ್ತದೆ.
609 ಸದಸ್ಯರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ರಚಿಸಿದ ವಿಚಕ್ಷಣ ಜಾಗೃತದಳ ಸಹ ಪರೀಕ್ಷಾ ಸಮಯದಲ್ಲಿ ಕಾರ್ಯ ನಿರತವಾಗಿರುತ್ತದೆ. ಇದಲ್ಲದೇ ಪ್ರತಿ 2817 ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಸ್ಥಾನಿಕ ಜಾಗೃತ ದಳವನ್ನು ಸಹ ನೇಮಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಪರೀಕ್ಷಾ ಕೇಂದ್ರಗಳಿಗೆ ಇಬ್ಬರಂತೆ ಪೆÇಲೀಸ್ ಸದಸ್ಯರ ಸೇವೆ ಪಡೆಯಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವೀಕ್ಷಣಾ ದಳದ ಎಲ್ಲ ಸದಸ್ಯರುಗಳಿಗೂ ಗುರುತಿನ ಚೀಟಿ ಮತ್ತು ಟ್ಯಾಗ್ಗಳನ್ನು ವಿತರಿಸಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಮೊಬೈಲ್ ಫೆÇೀನ್ ಉಪಯೋಗಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಇರಿಸಿರುವ ಭದ್ರತಾ ಕೊಠಡಿಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಗಳನ್ನು ಅಳವಡಿಸಲಾಗಿದೆ.
ಜನವರಿ 29ನೇ ದಿನಾಂಕದಂದು ಮಾನ್ಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಪೆÇಲೀಸ್ ಸೂಪರಿಂಟೆಂಡೆಂಟ್ ಹಾಗೂ ಉಪನಿರ್ದೇಶಕರು ಆಡಳಿತರವರನ್ನು ಉದ್ದೇಶಿಸಿ ಪರೀಕ್ಷಾ ಸಿದ್ಧತೆ ಬಗ್ಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಲಾಗಿತ್ತೆಂದು ಮಂಡಳಿ ಹೇಳಿದೆ.
ಇಲಾಖಾ ಕಛೇರಿಯಲ್ಲಿ ಸಹಾಯ ವಾಣಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ದೂರವಾಣಿ ಸಂಖ್ಯೆ 23310075/23310076 ರಲ್ಲಿ ಬೆಳಿಗೆÉ್ಗ 9 ರಿಂದ ಸಂಜೆ 7 ಗಂಟೆಯವರೆಗೆ ಪರೀಕ್ಷಾ ಸಂಬಂಧ ವಿಷಯಗಳ ಹಾಗೂ ಪರೀಕ್ಷಾ ಸಮಯದಲ್ಲಿ ಎದುರಾಗ ಬಹುದಾದ ಸಮಸ್ಯೆಗಳ ಬಗ್ಗೆ ಸಲಹೆಗಳನ್ನು ನೀಡಲಾಗುವುದು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2018ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ವಿಷಯವಾರು ನೀಲನಕ್ಷೆಯನ್ನು ಹಾಗೂ ಹಳೆಯ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ವಿಕಲಚೇತನ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ನೆಲಮಹಡಿಯಲ್ಲಿ ಆಸನ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ ಎಂದು ಪರೀಕ್ಷಾ ಮಂಡಳಿ ಹೇಳಿದೆ.