ಎ. ರಾಜಾ, ಕನಿಮೋಳಿ ಸಹಿತ 19 ಮಂದಿಗೆ ನೋಟಿಸ್‍:

ನವದೆಹಲಿ, ಮಾ.21- ಬಹುಕೋಟಿ ರೂ.ಗಳ 2-ಜಿ ಸ್ಪೆಕ್ಟ್ರಂ ಹಗರಣದಲ್ಲಿ ಖುಲಾಸೆಗೊಂಡಿದ್ದ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ, ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ ಈ ಪ್ರಕರಣದ ಎಲ್ಲ 19 ಮಂದಿಗೆ ದೆಹಲಿ ಹೈಕೋರ್ಟ್ ನೋಟಿಸ್‍ಗಳನ್ನು ಜಾರಿಗೊಳಿಸಿದೆ.  ಈ ಬೆಳವಣಿಗೆಯಿಂದಾಗಿ 2-ಜಿ ಹಗರಣ ಮತ್ತೆ ಇವರೆಲ್ಲರ ಕೊರಳು ಸುತ್ತಿಕೊಳ್ಳುವ ಸಾಧ್ಯತೆ ಇದೆ.
ಕಳೆದ ವರ್ಷ ಡಿಸೆಂಬರ್ 21ರಂದು ಸಿಬಿಐ ವಿಶೇಷ ನ್ಯಾಯಾಲಯ ಈ ಹಗರಣದ ಎಲ್ಲ 19 ಮಂದಿಯನ್ನು ಖುಲಾಸೆಗೊಳಿಸಿತ್ತು. ಇದರ ವಿರುದ್ಧ ನವದೆಹಲಿಯ ಜಾರಿ ನಿರ್ದೇಶನಾಲಯ ಮಾ.19ರಂದು ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಈಗ ಎ. ರಾಜಾ, ಕನಿಮೋಳಿ ಸಹಿತ 19 ಮಂದಿಗೆ ನೋಟಿಸ್‍ಗಳನ್ನು ಜಾರಿಗೊಳಿಸಿರುವ ನ್ಯಾಯಮೂರ್ತಿ ಎಸ್.ಪಿ.ಗರ್ಗ್ ಮಾ.26ರಂದು ವಿಚಾರಣೆ ನಡೆಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ