ಯಾನ್ಗೊನ್, ಮಾ.21-ವ್ಯಾಪಕ ಹಿಂಸಾಚಾರದ ಕಳಂಕಕ್ಕೆ ಗುರಿಯಾಗಿರುವ ಮ್ಯಾನ್ಮರ್ ರಾಷ್ಟ್ರಾಧ್ಯಕ್ಷ ಹಾಗೂ ನಾಯಕಿ ಅಂಗ್ ಸ್ಯಾನ್ ಸೂ ಕೀ ಬಲಗೈ ಬಂಟ ಹಿಟಿನ್ ಕ್ಯಾವ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಎರಡು ವರ್ಷಗಳ ಕಾಲ ದೇಶದ ಅಧ್ಯಕ್ಷರಾಗಿದ್ದ ಅವರು ಇಂದು ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ.
ಮ್ಯಾನ್ಮರ್ ಅಧ್ಯಕ್ಷ ಯು. ಹಿಟಿನ್ ಕ್ಯಾವ್ ಮಾರ್ಚ್ 21, 2018ರಂದು ರಾಜೀನಾಮೆ ನೀಡಿದ್ದಾರೆ. ಒಂದು ವಾರದೊಳಗೆ ಹೊಸ ನಾಯಕನನ್ನು ಆಯ್ಕೆ ಮಾಡಲಾಗುವುದು ಎಂದು ಅಧ್ಯಕ್ಷರ ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ.