ಬೀಜಿಂಗ್:ಮಾ-20: ನಮ್ಮ ನೆಲದ ಒಂದಿಂಚು ಭೂಮಿಯನ್ನು ನಾವು ಬಿಟ್ಟು ಕೊಡುವುದಿಲ್ಲ. ವೈರಿಗಳ ವಿರುದ್ಧ ರಕ್ತಮಯ ಯುದ್ಧಕ್ಕೂ ನಾವು ಸಿದ್ಧವೆಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ತಿಳಿಸಿದ್ದಾರೆ.
ಚೀನಾ ಸಂಸತ್ತಿನಲ್ಲಿ ನಡೆದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಅಧ್ಯಕ್ಷ ಜಿನ್ಪಿಂಗ್, ನಮ್ಮ ಭೂಮಿಯಲ್ಲಿ ಒಂದೇ ಒಂದು ಇಂಚನ್ನೂ ಬಿಟ್ಟುಕೊಡುವುದಿಲ್ಲ. ಹಾಗೇ ನಮ್ಮ ವೈರಿಗಳ ವಿರುದ್ಧ ರಕ್ತಸಿಕ್ತ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಅಧ್ಯಕ್ಷರ ಮಾತಿಗೆ ಸಮ್ಮತಿ ಸೂಚಿಸಿದ ಚೀನಾ ಪ್ರಧಾನಿ ಲಿ ಕೆಕಿಯಾಂಗ್ “ಚೀನಾ ತನ್ನದೇ ಆದ ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯುವಲ್ಲಿ ದೃಢನಿಶ್ಚಯವನ್ನು ಹೊಂದಿದೆ ತನ್ನ ಭೂಮಿಯ ಒಂದು ಇಂಚನ್ನೂ ಬಿಟ್ಟುಕೊಡುವುದಿಲ್ಲ. ಹಾಗೆಯೇ ಇತರರ ಭೂಪ್ರದೇಶವನ್ನು ಚೀನಾ ಎಂದಿಗೂ ಅತಿಕ್ರಮಿಸುವುದಿಲ್ಲ ಎಂದು ಹೇಳಿದ್ದಾರೆ.
Xi Jinping warns,ready to ‘fight bloody battles’, against China’s enemies