ನಮ್ಮ ಇವಿಎಂಗಳು ಸಮರ್ಥವಾಗಿವೆ: ಆಯೋಗ ಸ್ಪಷ್ಟನೆ

ನವದೆಹಲಿ: ಭಾರತೀಯ ಚುನಾವಣಾ ಆಯೋಗ ಬಳಕೆ ಮಾಡುತ್ತಿರುವ ಇವಿಎಂ ಮಷೀನ್‌ಗಳು ಸಮರ್ಥ ಹಾಗೂ ಸಮರ್ಪಕವಾಗಿದ್ದು, ಇವುಗಳ ಜಗತ್ತಿನಲ್ಲೇ ವಿಶಿಷ್ಟವಾದವು ಎಂದು ಆಯೋಗ ಸ್ಪಷ್ಟನೆ ನೀಡಿದೆ.

ಈ ಕುರಿತಂತೆ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್, ಭಾರತೀಯ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು ಜಗತ್ತಿನಲ್ಲಿಯೇ ಅತಿ ವಿಶಿಷ್ಟವಾದವುಗಳು ಎಂದಿದ್ದಾರೆ.

ನಮ್ಮ ಇವಿಎಂಗಳು ಹೊರಗಿನ ಜಗತ್ತಿಗೆ ಯಾವುದೇ ಸಂಪರ್ಕ ಅಥವಾ ಸಹಾಯಕ ಸರ್ಕ್ಯೂಟ್‌ಗಳನ್ನೂ ಹೊಂದಿಲ್ಲ. ಯಾವುದೇ ರೀತಿಯ ವೈರ್‌ಲೆಸ್‌ನಲ್ಲಿ ಇತರ ಯಂತ್ರಗಳಿಗೆ ಸಂಪರ್ಕಿಸುವ ಸಾಮರ್ಥ್ಯವನ್ನೂ ಸಹ ಇವುಗಳೂ ಹೊಂದಿಲ್ಲ. ಈ ರೀತಿಯ ಇವಿಎಂಗಳನ್ನು ಜಗತ್ತಿನ ಬೇರೆ ಯಾವುದೇ ಭಾಗದಲ್ಲಿ ಬಳಸಿಲ್ಲ. ಇದು ನಮ್ಮ ನೂತನ ಆವಿಷ್ಕಾರ ಎಂದು ತಿಳಿಸಿದ್ದಾರೆ.

ಇತ್ತೀಚಿನ ಯಾವುದೇ ಚುನಾವಣೆಗಳು ನಡೆದರೂ ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು ಇವಿಎಂ ಮಷೀನ್‌ಗಳ ಕುರಿತಾಗಿ ಹೇಳಿಕೆ ನೀಡಿ, ಇದರಿಂದಾಗಿ ಬಿಜೆಪಿ ಗೆಲುವು ಸಾಧಿಸುತ್ತಿದೆ ಎಂದು ಆರೋಪಿಸಿದ್ದವು. ಅಲ್ಲದೇ ಇವಿಎಂ ಮಷೀನ್ ಬದಲಾಗಿ ಬ್ಯಾಲೆಟ್ ಪೇಪರ್ ಬಳಸಬೇಕು ಎಂಬ ಕೂಗೂ ಸಹ ಬಲವಾಗಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ