ಮಂಗಳೂರು, ಮಾ.20-ಇಲ್ಲಿನ ತೆಂಕ ಎರ್ನಾಮಲದಲ್ಲಿರುವ ರಾಜೀವ್ಗಾಂಧಿ ನ್ಯಾಷನಲ್ ಅಕಾಡೆಮಿಯ ನವೀಕೃತ ಕಟ್ಟಡದ ಉದ್ಘಾಟನೆಗೆ ಆಗಮಿಸಿದ ರಾಹುಲ್ಗಾಂಧಿ ಇದಕ್ಕೂ ಮುನ್ನ ಇಲ್ಲಿಗೆ ಸಮೀಪದ ಬೀಚ್ಗೆ ತೆರಳಿ ಮೀನುಗಾರರ ಜೊತೆ ಸಂವಾದ ನಡೆಸಿದರು.
ತಮ್ಮ ನಿಗದಿತ ಕಾರ್ಯಕ್ರಮಕ್ಕಿಂತ ಅರ್ಧಗಂಟೆ ತಡವಾಗಿ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, ಇಲ್ಲಿಗೆ ಸಮೀಪದ ಬೀಚ್ಗೆ ತೆರಳಿ ಮೀನುಗಾರರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ನಂತರ ತೆಂಕ ಎರ್ನಾಮಲದಲ್ಲಿ ಸೇವಾ ದಳ ಸಂಸ್ಥೆಯ ರಾಜೀವ್ಗಾಂಧಿ ನ್ಯಾಷನಲ್ ಅಕಾಡೆಮಿ ನವೀಕೃತ ಕಟ್ಟಡ ಉದ್ಘಾಟನೆ ನೆರವೇರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ರಮಾನಾಥರೈ, ವಿನಯ್ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಸೇರಿದಂತೆ ಬಹುತೇಕರು ಜೊತೆಗಿದ್ದರು.