ನವದೆಹಲಿ, ಮಾ.19- ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ಗಾಗಿ ಆಗ್ರಹಿಸಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಎನ್ಡಿಎನಿಂದ ಹೊರಬಂದಿರುವ ಟಿಡಿಪಿ ಮಂಡಿಸಿರುವ ಅವಿಶ್ವಾಸ ನಿರ್ಣಯ ಕುರಿತು ಲೋಕಸಭೆಯಲ್ಲಿ ಇಂದೂ ಚರ್ಚೆ ನಡೆಯಲಿಲ್ಲ.
ವಿವಿಧ ವಿಷಯಗಳ ಕುರಿತು ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆ, ಧರಣಿಯಿಂದ 11ನೆ ದಿನದ ಕಲಾಪವೂ ಬಲಿಯಾದ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ವಿಷಯದ ಬಗ್ಗೆ ಸದನದಲ್ಲಿ ಪ್ರಸ್ತಾಪವಾಗಲಿಲ್ಲ.
ಟಿಡಿಪಿ ಮತ್ತು ಟಿಎಸ್ಆರ್ ಅವಿಶ್ವಾಸ ನಿರ್ಣಯಕ್ಕಾಗಿ ನೀಡಿರುವ ನೋಟಿಸ್ ಅಂಗೀಕಾರವಾಗಿದ್ದರೂ ಕಲಾಪದಲ್ಲಿ ಗದ್ದಲ ಉಂಟಾಗಿ ಸದನ ನಾಳೆಗೆ ಮುಂದೂಡಲಾಗಿದೆ.
ಅವಿಶ್ವಾಸ ನಿರ್ಣಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ರಾಜನಾಥ್ ತಿಳಿಸಿದ್ದಾರೆ.