ಮಾಸ್ಕೋ:ಮಾ-19: ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೆ ಆರು ವರ್ಷಗಳ ಕಾಲಕ್ಕೆ ಪುಟಿನ್ ಅಧ್ಯಕ್ಷೀಯ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.
ಸರಿಸುಮಾರು ಎರಡು ದಶಕಗಳಿಂದ ರಷ್ಯಾ ಆಳತ್ತಿರುವ ಪುಟಿನ್ ಅತ್ಯುತ್ತಮವಾಗಿ ಚುನಾವಣಾ ಕಾರ್ಯಕ್ಷಮತೆ ತೋರಿದ್ದಾರೆ, ಶೇ. 76 ರಷ್ಟು ಮತದಾನವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಆದರೆ ವಿರೋಧ ಪಕ್ಷ ಇದನ್ನು ಅನೈತಿಕತೆಯ ಪರಮಾವಧಿ ಎಂದು ದೂರಿದೆ. ಬ್ಯಾಲಟ್ ಪೇಪರ್ ನಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದೆ.
ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪುಟಿನ್ ಉಳಿದ 7 ಅಭ್ಯರ್ಥಿಗಳನ್ನು ಬದಿಗೊತ್ತಿ ರಷ್ಯಾದ ಸಮರ್ಥ ನಾಯಕರಾಗಿದ್ದಾರೆ. ಅವರ ಸಾಂಪ್ರಾದಾಯಿಕ ವಿಮರ್ಶಕ ಅಲೆಕ್ಸಿ ನಾವ್ಲಾನಿ ಅವರು ಬ್ಯಾಲಟ್ ಅನ್ನು ಕಾನೂನಾತ್ಮಕ ಕಾರಣಗಳಿಗಾಗಿ ತಡೆ ಹಿಡಿಯಲಾಗಿದೆ.
ಈ ಫಲಿತಾಂಶ ಬರುತ್ತದೆ ಎಂಬ ಆತ್ಮ ವಿಶ್ವಾಸ ನನಗಿತ್ತು ಎಂದು ಪುಟಿನ್ ಹೇಳಿದ್ದಾರೆ. ಫಲಿತಾಂಶ ಪ್ರಕಟಗೊಂಡ ನಂತರ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ದೇಶದ ಮಕ್ಕಳ ಮುಂದಿನ ಭವಿಷ್ಯದ ಪರವಾಗಿ ನಮ್ಮ ಆಲೋಚನೆಗಳಿರುತ್ತವೆ ಎಂದು ಹೇಳಿದ್ದಾರೆ.