ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣ: ನೀರವ್ ಮೋದಿಗೆ ಸೇರಿದ ಆಸ್ತಿ ವಶಪಡಿಸಿಕೊಂಡ ಇಡಿ

ನವದೆಹಲಿ:ಮಾ-19:  ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಉದ್ಯಮಿ ನೀರವ್ ಮೋದಿಗೆ ಸೇರಿದ ಅಹ್ಮದ್ ನಗರದಲ್ಲಿರುವ ಸೌರ ವಿದ್ಯುತ್ ಘಟಕ ಮತ್ತು 134 ಎಕರೆ ಜಮೀನನ್ನು ವಶಕ್ಕೆ ಪಡಿಸಿಕೊಂಡಿದೆ.

ಈ ಹಿಂದೆ ಜಾರಿ ನಿರ್ದೇಶನಾಲಯ ನೀರವ್ ಮೋದಿಗೆ ಸೇರಿದ ಸುಮಾರು 523.72 ಕೋಟಿ ರೂಪಾಯಿ ಬೆಲೆಬಾಳುವ 21 ಆಸ್ತಿಗಳು ಮತ್ತು ಅವರ ಒಡೆತನದ ಕಂಪೆನಿಗಳನ್ನು ತಾತ್ಕಾಲಿಕವಾಗಿ ಲಗತ್ತಿಸಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳ ಪ್ರಕಾರ, ಗೀತಾಂಜಲಿ ಜೆಮ್ಸ್ ಅಧ್ಯಕ್ಷ ಮೆಹುಲ್ ಚೊಕ್ಸಿ, ನೀರವ್ ಮೋದಿ ಮತ್ತು ಅವರ ಅಳಿಯನಿಗೆ ಸೇರಿದ ಪಾಸ್ ಪೋರ್ಟ್ ಗಳನ್ನು ಹಿಂತೆಗೆದುಕೊಂಡಿತ್ತು. ಇವರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿದ್ದ ಶೋಕಾಸ್ ನೊಟೀಸ್ ಗೆ ಪ್ರತಿಕ್ರಿಯಿಸಿರಲಿಲ್ಲ.

ಅನೇಕ ಮೂಲಗಳಿಂದ ಸಾಲ ಪಡೆದುಕೊಳ್ಳಲು ಸಾಲ ಒಪ್ಪಂದ ಪತ್ರವನ್ನು ಪಡೆದುಕೊಂಡಿದ್ದ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ, ಸುಮಾರು 1.8 ಶತಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದಾರೆ. 2011ರಲ್ಲಿ ಆರಂಭವಾದ ಹಗರಣ ಕಳೆದ ತಿಂಗಳು ಬೆಳಕಿಗೆ ಬಂದಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ