
ಕೊಪ್ಪಳ: ಕೊಪ್ಪಳದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ.
ಜಿಲ್ಲೆಯ ಯಾವುದೇ ಭಾಗಕ್ಕೂ ನಾನು ಬಂದರೂ ಇದು ನನ್ನದೇ ಕ್ಷೇತ್ರ ಎಂದು ಭಾಸವಾಗುತ್ತದೆ. ಹೀಗಾಗಿ ಈ ಭಾಗಕ್ಕೆ ಅನುದಾನ ನೀಡಲು ಹಿಂದೇಟು ಹಾಕಿಲ್ಲ. ರಾಯರಡ್ಡಿ ಕೇಳಿದ ಎಲ್ಕ ಯೋಜನೆಗೆ ಮಂಜೂರಾತಿ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಯಲಬುರ್ಗಾ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಲ್ಲ ಕಡೆಗೂ ಆದ್ಯತೆ ಮೇರೆಗೆ ಕೆರೆ ತುಂಬಿಸುವ ಕಾರ್ಯ ಕೈಗೊಂಡಿದ್ದೇವೆ. ರಾಜ್ಯದಲ್ಲಿ ಮೂವತ್ತಾರು ಸಾಚಿರ ಕೆರೆಗಳಿವೆ. ಇದರಿಂದಾಗಿ ಅಂತರ್ಜಲ ಕುಸಿದಿದೆ. ಹೀಗಾಗಿ ಕೆರೆ ತುಂಬಿಸುವ ಯೋಜನೆಗೆ ಒಂಭತ್ತು ಸಾವಿರ ಕೋಟಿ ನೀಡಲಾಗಿದೆ. ಇದರಿಂದಾಗಿ ಅಂತರ್ಜಲ ಮೇಲೆ ಬಂದಿದೆ. ಕೃಷಿಭಾಗ್ಯ ಯೋಜನೆಯಡಿ ಎರಡು ಲಕ್ಷ ಕೃಷಿಹೊಂಡಗಳನ್ನು ನಿರ್ಮಿಸಲಾಗಿದೆ. ಹಿಂದಿನ ಸರ್ಕಾರದಲ್ಲಿ ಈ ಯೋಜನೆ ಇರಲಿಲ್ಲ. ನಮ್ಮ ಅವಧಿಯಲ್ಲಿ ಜಾರಿ ಮಾಡಲಾಗಿದೆ ಎಂದರು.
ರಾಜ್ಯವನ್ನು ಬರ ಮುಕ್ತ ಮಾಡಲು ನಾವು ಪಣತೊಟ್ಟಿದ್ದೇವೆ. ಎಲ್ಲ ಯೋಜನೆಗಳನ್ನು ರಾಜಕಾರಣಕ್ಕಾಗಿ ಮಾಡಿಲ್ಲ. ಇದು ರಾಜಕೀಯ ಬದ್ಧತೆ. ಹಿಂದೆ ಹೊಸಪೇಟೆಯಿಂದ ಕೂಡಲಸಂಗಮದವರೆಗೆ ನೀರಾವರಿಗಾಗಿ ಪಾದಯಾತ್ರೆ ನಾಡಿದ್ದೆ. ಆಗ ಪ್ರತಿವರ್ಷ ನೀರಾವರಿಗಾಗಿ ಹತ್ತು ಸಾವಿರ ಕೋಟಿ ನೀಡುವುದಾಗಿ ಹೇಳಿದ್ದೆ. ಅದರಂತೆ ನಡೆದುಕೊಂಡಿದ್ದೇನೆ. ಎಲ್ಲ ನೀರಾವರಿ ಯೋಜನೆಗಳು ಮುಗಿಯಲು ಒಂದು ಲಕ್ಷ ಕೋಟಿ ಬೇಕಾಗುತ್ತದೆ. ಅದೇ ಹಿಂದಿನ ಸರ್ಕಾರ ಕೇವಲ ಹದಿನೆಂಟು ಸಾವಿರ ಕೋಟಿ ನೀಡಿತ್ತು. ಆದರೆ ನಾವು ಐವತ್ತು ಸಾವಿರ ಕೋಟಿ ನೀಡಿದ್ದೇವೆ. ಆದರೂ ನಮ್ಮಬಗ್ಗೆ ವಿಪಕ್ಷಗಳು ಸುಳ್ಳು ಪ್ರಚಾರ ಮಾಡುತ್ತಿವೆ. ಯಾರು ಏನೆ ಹೇಳಿದರೂ ಕೃಷ್ಣಾ ಬಿ ಸ್ಕೀಂ ಮಾಡಿಯೇತಿರುತ್ತೇವೆ ಎಂದು ಹೇಳಿದರು.
ಪ್ರಧಾನಿ ಮೋದಿ ಉಜ್ವಲ ಯೋಜನೆಯಡಿ ರಾಜ್ಯದಲ್ಲಿ ಕೊಟ್ಟಿದ್ದು ಎಂಟು ಲಕ್ಷ ಕುಟುಂಬಕ್ಕೆ ಮಾತ್ರ. ನಾವು ಕೊಟ್ಟಿದ್ದು ಮೂವತ್ತು ಲಕ್ಷ ಕುಟುಂಬಕ್ಕೆ ನೀಡಿದ್ದೇವೆ. ಒಂದು ಕೋಟಿ ಮೂವತ್ತು ಬಡಕುಟುಂಬಗಳಿಗೆ ಉಚಿತವಾಗಿ ಆರೋಗ್ಯಭಾಗ್ಯ ಕಾರ್ಡ್ ನೀಡಲಾಗಿದೆ. ಇಡೀ ದೇಶದ ಯಾವುದೇ ರಾಜ್ಯದಲ್ಲಿ ಈ ಯೋಜನೆ ಇಲ್ಲ. ಎಪಿಎಲ್ ಕಾರ್ಡುದಾರರಿಗೂ ಶೇ. ೩೦ರಷ್ಟು ಅನುದಾನವನ್ನು ಸರ್ಕಾರ ನೀಡುತ್ತದೆ ಎಂದರು.
ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ, ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಇದು ಎಪ್ರೀಲ್ ಒಂದರಿಂದ ಜಾರಿಗೆ ಬರಲಿದೆ. ಎಸ್ಸಿ, ಎಸ್ಟಿ ಬಗ್ಗೆ ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ಅವರಿಗೆ ಅನುಕೂಲವಾಗಲು ಕಾನೂನು ಜಾರಿ ಮಾಡಲಾಗಿದೆ.
ಬಿಜೆಪಿಯವರು ಬಿಜೆಪಿ ನಡಿಗೆ ದಲಿತ ಕಾಲೋನಿ ಕಡೆಗೆ ಎಂದು ನಾಟಕ ಮಾಡುತ್ತಾರೆ. ಹೊಟೆಲ್ ತಿಂಡಿ ತಂದು ದಲಿತರ ಮನೆಯಲ್ಲಿ ತಿನ್ನುತ್ತಾರೆ. ಹಾಗೆ ನೋಡಿದರೆ ದಲಿತರಿಗಾಗಿ ಮೂರು ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರ ಬಳಸಬೇಕು. ಆದರೆ ಬಿಜೆಪಿ, ಕೇಂದ್ರ ಸರ್ಕಾರಕ್ಕೆ ಇವರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಜೆಡಿಎಸ್ ಗೆಲ್ಲುವ ಪಕ್ಷ ಅಲ್ಲ, ಅದು ಸೋಲುವ ಪಕ್ಷ. ನಮ್ಮವರನ್ನೇ ಕರೆದು ಚುನಾವಣೆಗೆ ನಿಲ್ಕಿಸುತ್ತಾರೆ. ಬಿಜೆಪಿಯ ೧೫೦ ಮಿಷನ್ ಠುಸ್ ಆಗಿದೆ. ಅದು ಐವತ್ತು ಸೀಟ್ ಗೆ ಇಳಿದಿದೆ. ಈ ಬಾರಿಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದ ಅವರು, ತುಂಗಭದ್ರಾ ಎಡದಂಡೆ ಕಾಲುವೆ ಭಾಗದ ಜನತೆಯ ಮನವಿ ಮನಗಂಡಿದ್ದೇನೆ. ಜಲಾಶಯದಲ್ಲಿನ ನೀರಿನ ಲಭ್ಯತೆ ನೋಡಿಕೊಂಡು. ಸರ್ವೆ ಮಾಡಿಸಿ ನೀರು ಬಿಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಅಧಿಕಾರಕ್ಕೆ ಬಂದ ತಕ್ಷಣ ಹಸಿವು ಮುಕ್ತ ಕರ್ನಾಟಕ ಮಾಡಲು ಅನ್ನಭಾಗ್ಯ ಯೋಜನೆ ರೂಪಿಸಲಾಗಿದೆ. ಇದಲ್ಲದೆ ರಾಜ್ಯದ ಎಲ್ಲ ಬಡ ವಿದ್ಯಾರ್ಥಿಗಳಿಗೆ ಅನೇಕ ಯೋಜನೆ ನೀಡಲಾಯಿತು. ನೀರಾವರಿ, ಕೃಷಿಗೆ, ಯೋಜನೆಗೆ ಅನುದಾನ ನೀಡಡಲಾಗಿದೆ. ರೈತರ ಸಾಲಮನ್ನಾ ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರ ಸಾಲಮನ್ನಾ ಎಂದು ಆರೋಪಿಸಿದರು.
ಹಿಂದಿನ ಯಡಿಯೂರಪ್ಪ ಸರ್ಕಾರ ನೀರಾವರಿಗೆ ಒಂದೂ ಪೈಸೆಯನ್ನು ನೀಡಿಲ್ಲ. ಎಲ್ಲವೂ ಕಾಂಗ್ರೆಸ್ ಸರ್ಕಾರದ ಅವಧಿಯ ಕೆಲಸಗಳು. ರಾಜ್ಯದಲ್ಲಿ ಇದುವರೆಗೂ ಶೇ. ೬೯ರಷ್ಟು ಒಣಭೂಮಿ ಇದೆ. ರೈತರ ಹಿತ ಕಾಯಲು ನೀರಾವರಿ ಯೋಜನೆ ಜಾರಿಗೆ ತರಲಾಗಿದೆ. ಇದರಂತೆ ವಿದ್ಯಾರ್ಥಿನಿಯರಿಗೆ ಒಂದು ತರಗತಿಯಿಂದ ಪಿಜಿ ವರೆಗೆ ಉಚಿತ ಶಿಕ್ಷಣ, ಬಡಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲಾಗಿದೆ ಎಂದು ತಿಳಿಸಿದರು.
ನಮ್ಮ ತಾಲೂಕಿನ ಮುವತ್ತಾರು ಕೆರೆಗಳಿಗೆ ನೀರು ತುಂಬಿಸಲು ಇಂದಿನಿಂದ ಕೆಲಸ ಆರಂಭಿಸಲಾಗುತ್ತದೆ.
ಮನೆಗೆ ನುಗ್ಗಿ ಬಿಜೆಪಿ ಕಾರ್ಯಕರ್ತನ ಬಂಧನ ವಿಚಾರ ದಲ್ಲಿ, ಬಂದಿಸಿರೊ ವಿಷಯ ನನಗೆ ಗೊತ್ತಿಲ್ಲ.ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕ್ರಮ ಕೈಗೊಂಡಿರಬಹುದು. ಬಿಜೆಪಿಯವರು ರಾಜಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆಂದ ಸಿ.ಎಮ್.