ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸುವಂತೆ ಪ್ರತಿಭಟನೆ, ಸಂಗಣ್ಣ ಕರಡಿ ಬಂಧನ

ಕೊಪ್ಪಳ ಮಾ 19: ಇಂದು ಸಿಎಂ ಕೊಪ್ಪಳಕ್ಕೆ ಆಗಮನ ಹಿನ್ನೆಲೆ ಯಲ್ಲಿ ಪ್ರತಿಭಟನೆ ಮಾಡಲಿರುವ ಬಿಜೆಪಿ, ಪ್ರತಿಭಟನೆಗೆ ನಿಷೇಧ ಹೇರಿರುವ ಕೊಪ್ಪಳ ಎಸ್ಪಿ.

ರೈತರ ಬೆಳೆಗಳಿಗೆ ಎಡದಂಡೆ ಕಾಲುವೆಗೆ ನೀರು ಕೊಡುವಂತೆ ಸಿಎಂಗೆ ಮನವಿ ಕೊಡಲು ಸಿದ್ದತೆ ನಡೆಸಿದ್ದ ಬಿಜೆಪಿ ಮುಖಂಡರು
ಸಿಎಂ ಆಗಮನ ವೇಳೆ ಪ್ರತಿಭಟನೆ ಮಾಡೋ ಸಾಧ್ಯತೆ ಇತ್ತು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಭಾಗಿಯಾಗದಂತೆ ಮುಖಂಡರ ಮನೆಗೆ ಹೋಗಿ ಪೊಲಿಸ್ರು ಬಂಧಿಸುತ್ತಿದ್ದರು. ಕೊಪ್ಪಳದ ಗಂಗಾವತಿ, ಕಾರಟಗಿ ,ಕನಕಗಿರಿ,ಕೊಪ್ಪಳ ಬಿಜೆಪಿ ಮುಖಂಡರ ಮನೆಗೆ ಹೋಗಿ ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದರು. ಈ ನಿಟ್ಟಿನಲ್ಲಿ ಸಂಸತ್ತಿನ ಸದಸ್ಯರಾದ ಶ್ರೀ ಸಂಗಣ್ಣ ಕರಡಿ ಯವರನ್ನೂ ಬಂಧಿಸಲಾಯಿತು.

ರಾಜ್ಯಸರ್ಕಾರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡ್ತಿದೆ ಎಂದು ಆಕ್ರೋಶ ಮತ್ತು ಬಿಜೆಪಿ ಮುಖಂಡರನ್ನ ಬಿಡುಗಡೆ ಮಾಡುವಂತೆ ಪೊಲೀಸ್ ಠಾಣೆ ಎದುರು ಪ್ರತಿಭಟನಾಕಾರರು ಧರಣಿ ಕುಳಿತರು. ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆಗೆ ಮುಂದಾಗಿದ್ದು ಪೊಲೀಸರು ನೂರಾರು ಕಾರ್ಯಕರ್ತರನ್ನು ಬಂಧಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ