ಬೆಂಗಳೂರು, ಮಾ.19- ಮನೆಯೊಂದರಲ್ಲಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಾಜಿನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕಾಶನಗರದ 7ನೆ ಮುಖ್ಯರಸ್ತೆ, 5ನೆ ಕ್ರಾಸ್ನ ಮೊದಲಿಯಾರ್ ಸೇವಾಶ್ರಮ ಸಮೀಪದ ನಿವಾಸಿ ಸಾವಿತ್ರಮ್ಮ (60) ಮತ್ತು ಮಗಳು ಮಂಜುಳಾ ಅಲಿಯಾಸ್ ದೇವಕಿ (37) ಆತ್ಮಹತ್ಯೆ ಮಾಡಿಕೊಂಡಿರುವ ತಾಯಿ-ಮಗಳು.
ಸಾವಿತ್ರಮ್ಮ ಅವರಿಗೆ ಒಬ್ಬ ಮಗನಿದ್ದು, ಆತ ಬೇರೆಡೆ ಮನೆ ಮಾಡಿಕೊಂಡು ವಾಸವಾಗಿದ್ದಾನೆ. ಪ್ರಕಾಶನಗರದ ಶೀಟ್ ಮನೆಯಲ್ಲಿ ಮಗಳೊಂದಿಗೆ ವಾಸವಾಗಿದ್ದ ತಾಯಿ, ಅಂಗಡಿಯೊಂದನ್ನು ಬಾಡಿಗೆಗೆ ನೀಡಿದ್ದು, ಬಾಡಿಗೆ ಹಣದಿಂದ ಜೀವನ ಸಾಗಿಸುತ್ತಿದ್ದರು.
ಈ ನಡುವೆ ತಾಯಿ-ಮಗಳು ಮನೆಯ ಕಬ್ಬಿಣದ ರಾಡ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಬೆಳಗ್ಗೆ ಅಕ್ಕಪಕ್ಕದ ಮನೆಯವರಿಗೆ ಇವರ ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿ ಸಾವಿತ್ರಮ್ಮ ಅವರ ಮಗ ಹಾಗೂ ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೆÇಲೀಸರು ಇವರ ಮನೆಯ ಬಾಗಿಲು ಒಡೆದು ನೋಡಿದಾಗ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಬಹುಶಃ ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ರಾಜಾಜಿನಗರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.