ಚೇಳೂರು,ಮಾ.19- ಸಾಲ ತೀರಿಸಲಾಗದೆ ಮನನೊಂದು ಯುಗಾದಿ ದಿನವೇ ರೈತನೊಬ್ಬ ತನ್ನ ತೋಟದಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೇಳೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನವೀನ್(38) ನೇಣಿಗೆ ಶರಣಾದ ವ್ಯಕ್ತಿ.
ಈತನ ತಾಯಿ ಅಂಬಿಕಮ್ಮ ಜಮೀನು ಅಭಿವೃದ್ದಿಪಡಿಸಲು ಗ್ರಾಮೀಣಾಭಿವೃದ್ದಿ ಬ್ಯಾಂಕ್ನಿಂದ 1.20 ಲಕ್ಷ ರೂ. ಸಾಲ ಪಡೆದಿದ್ದರು. ಇದನ್ನು ತೀರಿಸುವ ಜವಾಬ್ದಾರಿ ನವೀನ್ ಮೇಲಿತ್ತು. ಅಲ್ಲದೆ ಕೈ ಸಾಲವನ್ನು ಮಾಡಿಕೊಂಡಿಲ್ಲ. ಈತ ಸಾಲ ತೀರಿಸದೆ ನಿನ್ನೆ ತೋಟದಲ್ಲಿನ ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಈತನ ಪತ್ನಿ ಜಲಾಜಾಕ್ಷಿ ಪೆÇಲೀಸರಿಗೆ ದೂರು ನೀಡಿದ್ದು , ಸ್ಥಳಕ್ಕೆ ಎಎಸ್ಐ ಮುತ್ತುರಾಜ್, ರವೀಂದ್ರ ಶೆಟ್ಟಿ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.