ದಾವಣಗೆರೆ, ಮಾ.17- ನಿನ್ನೆ ರಾತ್ರಿಯಿಡಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಹರಪನಹಳ್ಳಿ ಚಿತ್ ಆಗಿದೆ. ಪಟ್ಟಣದ ಬಿಎಸ್ಎನ್ಎಲ್ ಕಚೇರಿ, ಡಿವೈಎಸ್ಪಿ ಕಚೇರಿ, ಬಾಲಕಿಯರ ಪಾಠಶಾಲೆ ಸೇರಿದಂತೆ ಹಲವೆಡೆ ನೀರು ನುಗ್ಗಿದೆ. ಹರಪನಹಳ್ಳಿ-ಕೊಟ್ಟೂರು ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು, ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ರಾತ್ರಿ ವಿದ್ಯುತ್ ಇಲ್ಲದ ಕಾರಣ ಕಚೇರಿಗಲಿಗೆ ನುಗ್ಗಿದ ನೀರನ್ನು ತೆಗೆಯಲು ಸಾಧ್ಯವಾಗಿಲ್ಲ. ಇಂದು ಮಧ್ಯಾಹ್ನದವರೆಗೂ ಅಗ್ನಿಶಾಮಕ ದಳದ ಸಿಬ್ಬಂದಿ ದಾವಿಸಿ ನೀರನ್ನು ಹೊರ ಹಾಕಲು ಶ್ರಮಿಸಿದರು. ತಗ್ಗು ಪ್ರದೇಶದಲ್ಲಿ ಮನೆಗಳಿಗೂ ನೀರು ನುಗ್ಗಿದ್ದು, ರಾತ್ರಿಯಿಡಿ ಮನೆಯವರು ನೀರು ಹೊರ ಹಾಕುವ ಮೂಲಕ ಜಾಗರಣೆ ಮಾಡಿದಂತಾಗಿದೆ. ಬಹಳ ಕಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದಿದ್ದು, ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.