ಅಭಯಚಂದ್ರಜೈನ್ ಕ್ಷಮೆ ಯಾಚಿಸದಿದ್ದರೆ ರಾಜ್ಯಾದ್ಯಂತ ಹೋರಾಟ

ಬೆಂಗಳೂರು, ಮಾ.17- ಶಾಸಕ ಅಭಯಚಂದ್ರ ಜೈನ್ ಅವರು ಮಹಾಸಂತರಾದ ಶ್ರೀ ಮುಕ್ತಾನಂದಸ್ವಾಮೀಜಿ ಅವರನ್ನು ನಿಂದಿಸಿರುವ ಬಗ್ಗೆ ಕ್ಷಮೆ ಕೇಳಬೇಕೆಂದು ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ವೆಂಕಟರಮಣ ಮಾತನಾಡಿ, ಸ್ವಾಮೀಜಿಯವರು ಪ್ರವಚನ ಮಾಡುವ ಸಂದರ್ಭದಲ್ಲಿ ಪುರಾಣ ಕಾಲದ ರಾಮ ಮತ್ತು ರಾವಣನ ಬಗ್ಗೆ, ಕೃಷ್ಣ ಹಾಗೂ ಕಂಸರ ಬಗ್ಗೆ ವಿವರಣೆ ನೀಡಿದ್ದಾರೆಯೇ ಹೊರತು ಯಾರನ್ನೂ ನಿಂದಿಸಿಲ್ಲ. ಆದರೆ, ಅದನ್ನು ಅಭಯಚಂದ್ರ ಜೈನ್ ಅವರು ತಪ್ಪಾಗಿ ತಿಳಿದು ಸ್ವಾಮೀಜಿಯವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಮಠಕ್ಕೆ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆದ್ದರಿಂದ ಅಭಯಚಂದ್ರಜೈನ್ ಬಹಿರಂಗ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಕ್ಷಮೆ ಯಾಚಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನಕಾರ್ಯದರ್ಶಿ ವಿ.ದೀಪಕ್, ನಗರ ಜಿಲ್ಲಾಧ್ಯಕ್ಷ ಮಹಾಲಿಂಗಯ್ಯ, ಖಜಾಂಚಿ ಎಸ್.ಧನರಾಜ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ