![Shriya Saran and Andrei Koscheev](http://kannada.vartamitra.com/wp-content/uploads/2018/03/Shriya-Saran-and-Andrei-Koscheev-678x348.png)
ಚೆನ್ನೈ:ಮಾ-17: ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿ ಶ್ರೇಯಾ ಶರಣ್ ತಮ್ಮ ರಷ್ಯನ್ ಗೆಳೆಯನ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಾರ್ಚ್ 12ರಂದು ಮುಂಬೈನ ತಮ್ಮ ನಿವಾಸದಲ್ಲಿ ಟೆನಿಸ್ ಆಟಗಾರ ಆ್ಯಂಡ್ರಿ ಕೊಸ್ಚೆಯೇವ್ ಜತೆ ಸಪ್ತಪದಿ ತುಳಿದಿದ್ದು ಮದುವೆಗೆ ಕೇವಲ ಕುಟುಂಬಸ್ಥರು ಮತ್ತು ತೀರ ಆಪ್ತವರ್ಗಕ್ಕೆ ಮಾತ್ರ ಆಹ್ವಾನ ನೀಡಿದ್ದಾರೆ.
ಹಿಂದೂ ಸಂಪ್ರದಾಯದಂತೆ ಶ್ರೇಯಾ ಶರಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಬಾಲಿವುಡ್ ನಟ ಮನೋಜ್ ಬಾಜಪೇಯಿ ಮತ್ತು ಅವರ ಪತ್ನಿ ಶಬಾನ ಅಜ್ಮಿ ಮಾತ್ರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
2001ರಲ್ಲಿ ತೆಲುಗು ಚಿತ್ರ ಇಷ್ಟಂ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು.
Actress Shriya Saran, Marries ,Russian Boyfriend,Andrei Koscheev