ಶಾರ್ಜಾ, ಮಾ. 16- ವೆಸ್ಟ್ಇಂಡೀಸ್ನ ಸ್ಪಿನ್ ಬೌಲರ್, ಕೆಕೆಆರ್ನ ಅಲೌಂಡರ್ ಎಂದೇ ಬಿಂಬಿಸಿಕೊಂಡಿರುವ ಸುನೀಲ್ ನರೇನ್ ಅವರ ಬೌಲಿಂಗ್ ಮತ್ತೆ ವಿವಾದಕ್ಕೆಡೆಯಾಗಿದೆ.
ಪಾಕಿಸ್ತಾನ ಸೂಪರ್ ಲೀಗ್ ಚುಟುಕು ಕ್ರಿಕೆಟ್ನಲ್ಲಿ ಲಾಹೋರ್ ತಂಡವನ್ನು ಪ್ರತಿನಿಧಿಸುತ್ತಿರುವ ನರೇನ್, ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮತ್ತೆ ತಮ್ಮ ಅಸಂಬದ್ಧ ಬೌಲಿಂಗ್ನಿಂದ ಮಾತಾಗಿದ್ದಾರೆ.
ಲಾಹೋರ್ ತಂಡವು ಈಗಾಗಲೇ ಪ್ಲೇಆಫ್ನಿಂದ ಹೊರಗುಳಿದಿದ್ದು ಇಂದು ನಡೆಯಲಿರುವ ಪೇಶ್ವಾವಾರ್ ವಿರುದ್ಧದ ಪಂದ್ಯದಿಂದ ನರೇನ್ರನ್ನು ಹೊರಗಿಡಲಾಗಿದೆ.
ಸುನೀಲ್ರ ವಿವಾದಾತ್ಮಕ ಬೌಲಿಂಗ್ ಬಗ್ಗೆ ವೆಸ್ಟ್ಇಂಡೀಸ್ ಕ್ರಿಕೆಟ್ ತಂಡಕ್ಕೂ ಮಾಹಿತಿ ರವಾನಿಸಿದ್ದು, ಅವರ ಬೌಲಿಂಗ್ ವೈಖರಿಯ ಬಗ್ಗೆ ಪರಿಶೀಲಿಸಿ ಮುಂದಿನ ನಡೆಯನ್ನು ಪ್ರಕಟಿಸುವುದರಿಂದ ಏಪ್ರಿಲ್ 7 ರಿಂದ ನಡೆಯಲಿರುವ ಐಪಿಎಲ್ನಲ್ಲಿ ಬಾಲಿವುಡ್ನ ನಟ ಶಾರುಖ್ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ಸ್ ರೈಡರ್ಸ್ ತಂಡದ ಪರ ಆಡುವುದು ಅನುಮಾನ ಎನ್ನಲಾಗಿದೆ.
ಕ್ರಿಕೆಟ್ ಜೀವನಕ್ಕೆ ಅಡಿಯಿಟ್ಟಾಗಿನಿಂದಲೂ ತಮ್ಮ ವಿವಾದಾತ್ಮಕ ಬೌಲಿಂಗ್ನಿಂದ ನಿಷೇಧಗೊಳ್ಳುತ್ತಲೇ ಬಂದಿರುವ ಸುನೀಲ್ ನರೇನ್ರನ್ನು 2014ರ ಚಾಂಪಿಯನ್ಸ್ ಟ್ರೋಫಿ, 2015ರ ವಿಶ್ವಕಪ್ನಿಂದಲೂ ಹೊರಗಿಡಲಾಗಿತ್ತು.
2016ರಲ್ಲಿ ಅಂಗಳಕ್ಕಿಳಿದ ನರೇನ್ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 15 ಡಿಗ್ರಿಗಿಂತ ಕಡಿಮೆ ಅಂತರದಲ್ಲಿ ಬೌಲಿಂಗ್ ಮಾಡಿದ್ದರಿಂದ ಮತ್ತೆ ನಿಷೇಧಗೊಳಗಾಗಿದ್ದು ಈಗ ಮುಂಬರುವ ಐಪಿಎಲ್ನಿಂದ ಹೊರಗುಳಿಯುವುದು ಖಚಿತವಾಗಿದೆ.