ಬೆಂಗಳೂರು, ಮಾ.16- ನಡೆದು ಹೋಗುತ್ತಿದ್ದ ಮಹಿಳೆಯ ಕೊರಳಲ್ಲಿದ್ದ 40 ಗ್ರಾಂ ಸರವನ್ನು ಸರಗಳ್ಳರು ಎಗರಿಸಿರುವ ಘಟನೆ ಬನಶಂಕರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆಇಬಿ ರಸ್ತೆಯ 28ನೇ ಕ್ರಾಸ್, 27ನೇ ಮುಖ್ಯರಸ್ತೆಯ 2ನೆ ಹಂತದಲ್ಲಿ ನಿನ್ನೆ ಸಂಜೆ 4 ಗಂಟೆಯಲ್ಲಿ ನಳಿನಿ ಎಂಬುವರು ನಡೆದು ಹೋಗುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರ ಪೈಕಿ ಹಿಂಬದಿ ಸವಾರ ನಳಿನಿ ಅವರ ಕೊರಳಿಗೆ ಕೈ ಹಾಕಿ 40 ಗ್ರಾಂ ಸರ ಎಳೆದುಕೊಂಡು ಪರಾರಿಯಾಗಿದ್ದಾರೆ. ಸಹಾಯಕ್ಕಾಗಿ ಕೂಗಿಕೊಂಡರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಬನಶಂಕರಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಸರಗಳ್ಳರಿಗಾಗಿ ಬಲೆ ಬೀಸಿದ್ದಾರೆ.