ಮೈಸೂರು, ಮಾ.16-ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಹಣದ ರಾಜಕೀಯ ನಡೆಯುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಸಂಸದ ಎಂ.ವೀರಪ್ಪಮೊಯ್ಲಿ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಅವರು, ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ನಲ್ಲಿ ಹಣಬಲ ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ವೀರಪ್ಪಮೊಯ್ಲಿ ಟ್ವೀಟರ್ನಲ್ಲಿ ಹೇಳಿರುವುದು ಸತ್ಯವಿದೆ. ಸೀದಾರೂಪಾಯಿ ಸರ್ಕಾರ ವಿರುದ್ಧ ಆರೋಪಕ್ಕೆ ಕಾಂಗ್ರೆಸ್ ನಾಯಕರೇ ಆಗಿರುವ ಮೊಯ್ಲಿ ಅವರು ದಾಖಲೆ ನೀಡಿದ್ದಾರೆ ಎಂದು ಹೇಳಿದರು.