ಎಚ್.ಎಂ.ರೇವಣ್ಣ ವಿರುದ್ಧ ಲೋಕಾಯುಕ್ತದಲ್ಲಿ ದೂರು

ಬೆಂಗಳೂರು, ಮಾ.16- ಎಚ್.ಎಂ.ರೇವಣ್ಣ ಅವರು ಸಾರಿಗೆ ಸಚಿವರಾದ ನಂತರ 1600 ಕೋಟಿ ರೂ.ಗಳ ಬಸ್ ಖರೀದಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರೇವಣ್ಣ ಮತ್ತು ಐವರು ಐಎಎಸ್ ಅಧಿಕಾರಿಗಳ ವಿರುದ್ಧ ಎಸಿಬಿ ಹಾಗೂ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಗಣೇಶ್‍ಸಿಂಗ್ ಎಂಬುವರು ಎಚ್.ಎಂ.ರೇವಣ್ಣ, ಸಾರಿಗೆ ಇಲಾಖೆ ಅಧಿಕಾರಿಗಳಾದ ಡಾ.ಬಿ.ಬಸವರಾಜು, ಎಸ್.ಆರ್.ಉಮಾಶಂಕರ್, ವಿ.ಪೆÇನ್ನುರಾಜು, ಅಶೋಕ್‍ಆನಂದ್ ಮತ್ತು ಪಾಂಡುರಂಗ ಬೊಮ್ಮನಾಯಕ್ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಇಂದಿಲ್ಲಿ ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ