ಲಾಹೋರ್, ಮಾ.15-ಯುವ ತಾಲಿಬಾನ್ ಮಾನವ ಬಾಂಬರ್ ಒಬ್ಬ ಲಾಹೋರ್ನಲ್ಲಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ನಿವಾಸದ ಬಳಿಯ ಪೆÇಲೀಸ್ ಚೆಕ್ಪೆÇೀಸ್ಟ್ ಮೇಲೆ ನಡೆಸಿದ ದಾಳಿಯಲ್ಲಿ 10 ಮಂದಿ ಹತರಾಗಿದ್ದಾರೆ. ಸತ್ತವರಲ್ಲಿ ಐವರು ಪೆÇಲೀಸರೂ ಸೇರಿದ್ದಾರೆ. ನಿನ್ನೆ ಮಧ್ಯರಾತ್ರಿ ಮಾನವ ಬಾಂಬ್ ಸ್ಫೋಟ ನಡೆದಿದ್ದು, ಇಬ್ಬರು ಇನ್ಸ್ಪೆಕ್ಟರ್ಗಳು, ಮೂವರು ಕಾನ್ಸ್ಟೆಬಲ್ಗಳು ಹಾಗೂ ಇತರ ಐವರು ಹತರಾದರೆಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ 14 ಪೆÇಲೀಸರೂ ಸೇರಿದಂತೆ 25 ಮಂದಿ ಗಾಯಗೊಂಡಿದ್ದಾರೆ. ನಾಲ್ವರು ಪೆÇಲೀಸರ ಸ್ಥಿತಿ ಚಿಂತಾಜನಕವಾಗಿದೆ.