ವರ್ತೂರು ಹಾಗೂ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಗಮನ ಕೊಧದೆ ಕೇಂದ್ರ ಸಚಿವರು ಫೆÇೀಟೋಗಳಿಗೆ ಪೆÇೀಸ್ ಕೊಟ್ಟು ಹೋಗಿದ್ದಾರೆ

ಮಹದೇವಪುರ, ಮಾ.15- ಕೇಂದ್ರ ಸಚಿವರು ನೀಡಿದ ಭರವಸೆ ಈಡೇರಿಸಲಾಗದೆ ಸುಳ್ಳು ಮಾತುಗಳನ್ನು ಹೇಳಿ ಫೆÇೀಟೋಗಳಿಗೆ ಪೆÇೀಸ್ ಕೊಟ್ಟು ಹೋಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ವಾಗ್ದಾಳಿ ನಡೆಸಿದರು.
ಕ್ಷೇತ್ರದ ಹಗದೂರು ವಾರ್ಡ್‍ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ತೂರು ಹಾಗೂ ಬೆಳ್ಳಂದೂರು ಕೆರೆ ಪರಿಶೀಲನೆಗೆಂದು ಬಂದ ಸಚಿವರು ಫೆÇೀಟೋಗಳಿಗೆ ಪೆÇೀಸ್ ನೀಡಿ ಕೇಂದ್ರದಿಂದ ಈ ಕೆರೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದು ಹೇಳಿ ಹೋದರು.
ಅವರು ಬಿಡುಗಡೆ ಮಾಡದಿದ್ದಾಗ ನೀಡಿದ ಭರವಸೆಯಂತೆ ಹಣ ನೀಡಿ ಎಂದು ರಾಜ್ಯದಿಂದ ಪತ್ರ ಬರೆದರೆ ನಮ್ಮ ಬಳಿ ಹಣ ಇಲ್ಲ ಎಂದು ಮರು ಪತ್ರ ಬರೆಯುತ್ತಾರೆ. ಇಂತವರೆಲ್ಲ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮ್ಮಯ್ಯ ಅವರು ವರ್ತೂರು ಹಾಗೂ ಬೆಳ್ಳಂದೂರು ಕೆರೆ ಅಭಿವೃದ್ಧಿ ಸಾಕಷ್ಟು ಹಣ ನೀಡಿದ್ದಾರೆ. ಕೆರೆ ಸ್ವಚ್ಚಗೊಳಿಸಿ ಕೋಲಾರ ಭಾಗದ ಕೆರೆಗಳಿಗೆ ನೀರು ಕೊಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ನಗರವನ್ನು ಅಡವಿಟ್ಟವರಿಂದ ಬೆಂಗಳೂರು ರಕ್ಷಿಸಿ ಪಾದಯಾತ್ರೆ, ರಾತ್ರೋರಾತ್ರಿ ಟೆಂಡರ್ ಕರೆದು ಕೋಟಿ ಕೋಟಿ ಲೂಟಿ ಹೊಡೆಯುತ್ತಾರೆ, ಗಾರ್ಡ್‍ನ್ ಸಿಟಿಯಾಗಿದ್ದ ಬೆಂಗಳೂರನ್ನು ಗಾರ್ಬೇಜ್ ಸಿಟಿಯನ್ನಾಗಿ ಮಾಡಿದವರಿಂದ ಬೆಂಗಳೂರು ರಕ್ಷಸಿ ಪಾದಯಾತ್ರೆ ಇದೆಲ್ಲಾ ಚುನಾವಣೆ ಗಿಮಿಕ್ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಚುನಾವಣೆಗೆ ದುಡ್ಡು ಹಂಚಿ ಜನರನ್ನು ಮರಳು ಮಾಡಬಹುದು ಎಂದು ತಿಳಿದಿದ್ದಾರೆ ಬಿಜೆಪಿಯವರು, ನಮ್ಮ ಜನ ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಜೈಲಿಗೆ ಹೋಗಿ ಬಂದವರು ಯಾರು ಎಂದು ಜನರಿಗೆ ಗೊತ್ತು ಎಂದು ಹೇಳಿದರು.
ಕೆಪಿಸಿಸಿ ಪ್ರ.ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಮಹದೇವಪುರದಲ್ಲಿ ಬಿಜೆಪಿಯನ್ನು ತೊಲಗಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಲವು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಹಿಂದುಳಿದ ವರ್ಗಗಳ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ವರ್ತೂರು ಸುರೇಶ್ ಹಾಗೂ ಇನ್ನಿತರರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಪಾಲಿಕೆ ಸದಸ್ಯರಾದ ಉದಯ್‍ಕುಮಾರ್, ಹರಿಪ್ರಸಾದ್, ಟೆಂಟ್ ರಮೇಶ್, ಜಿಪಂ ಸದಸ್ಯರಾದ ಕೆಂಪರಾಜು, ಬ್ಲಾಕ್ ಅಧ್ಯಕ್ಷ ಜಯರಾಂರೆಡ್ಡಿ, ಮುಖಂಡರಾದ ನಾರಾಯಣಸ್ವಾಮಿ, ಎಂಸಿಸಿ ರವಿ, ರಾಜಣ್ಣ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ