ಇಂಫಾಲ್, ಮಾ.15- ಈಶಾನ್ಯ ರಾಜ್ಯ ಮಣಿಪುರದ ಟೆಗ್ನೊಪಾಲ್ ಜಿಲ್ಲೆಯಲ್ಲಿ ಕಳ್ಳಸಾಗಣೆದಾರನೊಬ್ಬನನ್ನು ಬಂಧಿಸಿರುವ ಭದ್ರತಾ ಪಡೆಗಳು 12 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಮಣಿಪುರ-ಅಸ್ಸಾಂ ಚೆಕ್ಪೆÇೀಸ್ಟ್ ಬಳಿ ಆರೋಪಿಯನ್ನು ಬಂಧಿಸಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಪ್ರಕಟಣೆ ತಿಳಿಸಿದೆ. ಆರೋಪಿಯನ್ನು ಜಪ್ತಿ ಮಾಡಲಾದ ಮಾಲಿನೊಂದಿಗೆ ಇಂಫಾಲ್ನಲ್ಲಿರುವ ಮಾದಕವಸ್ತು ನಿಯಂತ್ರಣ ಮಂಡಳಿ(ಎನ್ಸಿಬಿ)ಗೆ ಒಪ್ಪಿಸಲಾಗಿದೆ.