ವಿಕ್ರಂ ಇನ್‍ವೆಸ್ಟ್‍ಮೆಂಟ್ ಕಂಪೆನಿಯ ಮೋಸ ಜಾಲ ಬಗೆದಷ್ಟು ಬಯಲು

ಬೆಂಗಳೂರು, ಮಾ.15- ಎಕ್ಸ್‍ಪೆÇೀರ್ಟ್ ಅಂಡ್ ಷೇರು ಬ್ಯುಸಿನೆಸ್ ಮಾಡೋದಾಗಿ ಹೂಡಿಕೆದಾರರಿಂದ ಹಣ ಕಟ್ಟಿಸಿಕೊಂಡು ವಂಚಿಸಿರುವ ವಿಕ್ರಂ ಇನ್‍ವೆಸ್ಟ್‍ಮೆಂಟ್ ಕಂಪೆನಿಯ ಮೋಸ ಜಾಲ ಬಗೆದಷ್ಟು ಬಯಲಾಗ್ತಿದೆ.
ಹೂಡಿಕೆದಾರರಿಗೆ ಕಮಿಷನ್ ಆಸೆ ತೋರಿಸಿ ಎಲ್‍ಐಸಿ ಏಜೆಂಟರ್ ಮೂಲಕ ಶ್ರೀಮಂತರಿಗೆ ಗಾಳ ಹಾಕುತ್ತಿದ್ದ ಈ ಕಂಪೆನಿಗೆ ನೋಟ್‍ಬ್ಯಾನ್ ಬಳಿಕ ಪೀಕಲಾಟ ಶುರುವಾಗಿದೆ.
ಹೂಡಿಕೆದಾರರಿಗೆ ಹಣ ವಾಪಸ್ ಕೊಡದಿದ್ದಾಗ ಮೋಸದ ಜಾಲ ಬಯಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ 300 ಕೋಟಿ ರೂ. ವಂಚಿಸಿರುವುದು ಬಯಲಾಗಿದ್ದು, ಕ್ರಿಕೆಟಿಗರೊಬ್ಬರಿಗೆ ಆರೋಪಿ ಸುರೇಶ್ ಬೆನ್ನುಬಿದ್ದು 25 ಕೋಟಿ ರೂ. ಹಣ ಹೂಡಿಕೆ ಮಾಡಿಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
ವಿಕ್ರಂ ಇನ್‍ವೆಸ್ಟ್‍ಮೆಂಟ್ ಕಂಪೆನಿ ವಂಚನೆ ಪ್ರಕರಣದ ಆರೋಪಿಗಳು ಮಾಡಿರುವ ಬೇನಾಮಿ ಆಸ್ತಿಗಳ ಬಗ್ಗೆ ದಕ್ಷಿಣ ವಿಭಾಗದ ಪೆÇಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಈಗಾಗಲೇ ಪೆÇಲೀಸರ ವಶದಲ್ಲಿರುವ ಐದು ಮಂದಿ ಆರೋಪಿಗಳನ್ನು ತನಿಖಾ ತಂಡಗಳು ವಿಚಾರಣೆಗೊಳಪಡಿಸಿದ್ದು, ಹೂಡಿಕೆದಾರರಿಂದ ಪಡೆದ ಬಂಡವಾಳ ಎಲ್ಲೆಲ್ಲಿ ತೊಡಗಿಸಿದ್ದಾರೆಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿವೆ.
ಈ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿರುವ ನೂರಕ್ಕೂ ಹೆಚ್ಚು ಮಂದಿ ಈಗಾಗಲೇ ದೂರು ನೀಡಿದ್ದಾರೆ. ನಗರವಾಸಿಗಳಷ್ಟೇ ಅಲ್ಲದೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳವರೂ ಬಂದು ಈ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾಗಿ ದೂರು ನೀಡುತ್ತಿದ್ದಾರೆ.
ಈ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಲ್ಲಿ ಕೂಡಲೇ ಬನಶಂಕರಿ ಠಾಣೆಗೆ ದೂರು ನೀಡಬೇಕೆಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನೂರಕ್ಕು ಹೆಚ್ಚು ದೂರುಗಳು ಬಂದಿವೆ. ತನಿಖೆ ಮುಂದುವರೆದಿದೆ. ಇದು ದೊಡ್ಡ ಹಗರಣವಾಗಿರುವುದರಿಂದ ತನಿಖೆಗೆ ಹೆಚ್ಚು ಕಾಲಾವಕಾಶಬೇಕಾಗುತ್ತದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ