ನವದೆಹಲಿ, ಮಾ.14-ಸೈಬರ್ ಅಪರಾಧವು ಜಾಗತಿಕವಾಗಿ ಒಂದು ಉದ್ಯಮವಾಗುತ್ತಿದ್ದು, ಇಂಥ ಅಪರಾಧಗಳು ಆಗಾಗ ನಡೆಯುತ್ತಲೇ ಇರುತ್ತವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಇಂದು ಪೆÇಲೀಸ್ ಮುಖ್ಯಸ್ಥರ ಅಂತಾರಾಷ್ಟ್ರೀಯ ಸಂಘದ (ಐಎಸಿಪಿ) ಎರಡು ದಿನಗಳ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಆತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಸಂಪನ್ಮೂಲಗೂ ದುಷ್ಟರ ಕೈಗೆ ಲಭಿಸುತ್ತಿರುವುದರಿಂದ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೈಬರ್ ಭದ್ರತಾ ಜಾಲ ಸೋರಿಕೆ, ಹ್ಯಾಕರ್ಗಳಿಂದ ದತ್ತಾಂಶ ಕಳವು, ಕಂಪ್ಯೂಟರ್ ಮಾಲ್ವೇರ್ ಹಾಗೂ ಸೈಬರ್ ಕ್ರೈಂಗೆ ಸಂಬಂಧಪಟ್ಟ ಇತರ ಅಪರಾಧ ಪ್ರಕರಣಗಳಿಂದ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸೈಬರ್ ದಾಳಿಗಳು ಮತ್ತಷ್ಟು ತೀವ್ರವಾಗಬಹುದೆಂಬ ಭೀತಿ ಇದೆ. ಆದಾಗ್ಯೂ ಸೈಬರ್ ದಾಳಿಗಳನ್ನು ಹತ್ತಿಕ್ಕುವ ಸಾಧನ ಈಗಾಗಲೇ ಅಸ್ತಿತ್ವದಲ್ಲಿದ್ದು, ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಸುಧಾರಣೆಯಾಗಿ ಇಂಥ ಕೃತ್ಯಗಳನ್ನು ನಿರ್ಮೂಲನೆ ಮಾಡುತ್ತವೆ ಎಂಬ ವಿಶ್ವಾಸವನ್ನು ಗೃಹ ಸಚಿವರು ವ್ಯಕ್ತಪಡಿಸಿದರು.