ಸಮಗ್ರ ಕೊಳಗೇರಿ ಅಭಿವೃದ್ಧಿ ಕಾಯ್ದೆ ಜಾರಿಗೆ ಒತ್ತಾಯಿಸಿ ಮಾ.16ಕ್ಕೆ ಬೃಹತ್ ರ್ಯಾಲಿ

ಬೆಂಗಳೂರು,ಮಾ.13- ಸ್ಲಂ ನಿವಾಸಿಗಳಿಗೆ ವಸತಿ ಹಾಗೂ ನಿವೇಶನ ಹಕ್ಕನ್ನು ಖಾತ್ರಿಪಡಿಸುವ ಸಮಗ್ರ ಕೊಳಗೇರಿ ಅಭಿವೃದ್ಧಿ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿ ಇದೇ 16ರಂದು ಟೌನ್‍ಹಾಲ್ ಮುಂಭಾಗ ರಾಜ್ಯಮಟ್ಟದ ಬೃಹತ್ ರ್ಯಾಲಿ ಹಾಗೂ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಲಂ ನಿವಾಸಿಗಳ ಭೂಮಿ ಹಾಗೂ ವಸತಿ ಹಕ್ಕುಗಳನ್ನು ಖಾತ್ರಿಗೊಲಿಸುವ ಸಲುವಾಗಿ ಸಮಗ್ರ ಕೊಳಗೇರಿ ಅಭಿವೃದ್ಧಿ ಕಾಯ್ದೆ ರೂಪಿಸಲು ರಾಷ್ಟ್ರೀಯ ಕಾನೂನು ಶಾಲೆಯು ಸ್ಲಂ ಸಂಘಟನೆಯೊಂದಿಗೆ ಚರ್ಚೆ ನಡೆಸಿ ಕರಡು ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದೇವೆ.

ರಾಜ್ಯಾದ್ಯಂತ ಇರುವ ಎಲ್ಲ ಸ್ಲಂ ನಿವಾಸಿಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಸಮಗ್ರ ಕೊಳಗೇರಿ ಅಭಿವೃದ್ದಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳನ್ನು ಮನವಿ ಮಾಡಿದ್ದೇವೆ ಎಂದರು.

ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ಬೃಹತ್ ರ್ಯಾಲಿಯನ್ನು ಟೌನ್‍ಹಾಲ್‍ನಿಂದ ಫ್ರೀಡಂಪಾರ್ಕ್‍ನಲ್ಲಿ ಬೆಳಗ್ಗೆ 11 ಗಂಟೆಗೆ ನಡೆಸಿ ಬಹಿರಂಗ ಸಭೆ ನಡೆಸಲಾಗುವುದು ಎಂದರು.

ರಾಜ್ಯ ಸರ್ಕಾರಕ್ಕೆ ನಮ್ಮ ಪ್ರಮುಖ ಹಕ್ಕೋತ್ತಾಯಗಳೆಂದರೆ ಎಲ್ಲ ಸ್ಲಂ ನಿವಾಸಿಗಳಿಗೆ ಭೂಮಿಯ ಕರಪತ್ರ ವಿತರಿಸುವುದು, ರಾಜ್ಯದ ಯಾವುದೇ ಸ್ಲಂಗಳನ್ನು ತೆರವುಗೊಳಿಸಬಾರದು, ಎಲ್ಲ ಸ್ಲಂಗಳನ್ನು ಕಾಯ್ದೆ ಅನ್ವಯ ಘೋಷಣೆ ಮಾಡಬೇಕು, ಸ್ಲಂ ಜನರ ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಾಗೂ ಭೂಮಿಯನ್ನು ಮೀಸಲಿಡಬೇಕು, ಸ್ಲಂ ಅಭಿವೃದ್ದಿಗೆ ಸಂಬಂಧಪಟ್ಟಂತೆ ರಚಿಸಿರುವ ಯಾವುದೇ ಸಮಿತಿಗಳಲ್ಲಿ ಕನಿಷ್ಠ 50ರಷ್ಟು ಪ್ರಾತಿನಿಧ್ಯ ವಿಧಿಸಬೇಕು, ಅದರಲ್ಲಿ ಶೇ.60ರಷ್ಟು ಮಹಿಳೆಯರು ಇರಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ