ಹೊಸಕೋಟೆ, ಮಾ.14-ಗಾಂಜಾ ಮತ್ತಿನಲ್ಲಿ ಶಾಲಾ ವಿದ್ಯಾರ್ಥಿಗಳು ಪಟ್ಟಣದಲ್ಲಿ ಪುಂಡಾಟ ನಡೆಸಿದ್ದು ತೊಂದರೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ವಿದ್ಯಾರ್ಥಿಗಳು ಗಾಂಜಾ ಸೇವಿಸಿ ಶಾಲೆಗೆ ಚಕ್ಕರ್ ಹೊಡೆದು ಸಾರ್ವಜನಿಕ ಸ್ಥಳದಲ್ಲಿ ಪುಂಡಾಟ ನಡೆಸಿದ್ದರು. ಇದರಿಂದ ಕೋಪಗೊಂಡ ಸ್ಥಳೀಯರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು.
ಆದರೆ ಶಾಲಾ ಆಡಳಿತ ಮಂಡಳಿಯವರಾಗಲಿ, ಇತ್ತ ಪೆÇಲೀಸರಾಗಲಿ ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಂಡಿಲ್ಲ. ಶಾಲೆಗೆ ದೂರು ನೀಡಿದ ವಿಷಯ ತಿಳಿದು ವಿದ್ಯಾರ್ಥಿಗಳು ಕೆಲವರ ಮನೆಗಳಿಗೆ ಕಲ್ಲು ತೂರಿ ಕಿಟಕಿ ಗಾಜು ಒಡೆದು ಹಾಕಿ ನಮ್ಮ ವಿರುದ್ಧ ದೂರು ನೀಡುತ್ತೀರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಬೇಕು, ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಪೆÇಲೀಸರನ್ನು ಒತ್ತಾಯಿಸಿದ್ದಾರೆ.