ತಿರುವನಂತಪುರಂ,ಮಾ14-ದಕ್ಷಿಣ ಕನ್ಯಾಕುಮಾರಿಯಲ್ಲಿ ವಾಯುಭಾರ ಕುಸಿತಗೊಂಡಿದ್ದು, ಕೇರಳದಲ್ಲಿ ಚಂಡಮಾರುತದ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ನಿನ್ನೆ ಬೆಳಗ್ಗೆ 8.30ರಲ್ಲಿ ವಾಯುಭಾರ ಕುಸಿತ ತೀವ್ರಗೊಂಡಿದ್ದು , ವಿಶೇಷವಾಗಿ ದಕ್ಷಿಣ ಕೇರಳದಲ್ಲಿ ಚಂಡಮಾರುತದ ಪ್ರಬಾವ ಎದುರಾಗಿದೆ ಕರಾವಳಿ ಪ್ರದೇಶಗಳ ಮೀನುಗಾರರು ಮತ್ತು ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ಕೇರಳ ರಾಜ್ಯ ವಿಕೋಪ ನಿರ್ವಹಣಾ ಸಮಿತಿ ಹಾಗೂ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.
ಸಮುದ್ರದಲ್ಲಿ ಭಾರೀಲೆಗಳು ಏಳಲಿದ್ದು , ಬಲವಾದ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.