ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ 7 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

ವಿಶಾಖಪಟ್ಟಣಂ, ಮಾ.13-ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಆಂಧ್ರಪ್ರದೇಶದ ವಿಶಾಖಪಟ್ಟಣ ಪೆÇಲೀಸರು ಜಪ್ತಿ ಮಾಡಲಾದ 7 ಕೋಟಿ ರೂ. ಮೌಲ್ಯದ ಗಾಂಜಾವನ್ನು ಸುಟ್ಟು ಹಾಕಿದ್ದಾರೆ.
ಕಲ್ಯಾಣಪುಲೋವಾ ಪ್ರದೇಶದಲ್ಲಿ ಇಂದು ಮಾದಕ ವಸ್ತು ವಿಲೇವಾರಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಈ ಭಾರಿ ಪ್ರಮಾಣದ ಗಾಂಜಾವನ್ನು ಭಸ್ಮ ಮಾಡಲಾಗಿದೆ ಎಂದು ಉನ್ನತ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೆÇಲೀಸ್ ವರಿಷ್ಠಾಧಿಕಾರಿ(ವಿಶಾಖಪಟ್ಟಣ ಗ್ರಾಮಾಂತರ) ರಾಹುಲ್ ದೇವ್ ಶರ್ಮಾ ಮತ್ತು ಇತರ ಅಧಿಕಾರಿಗಳು ಸಹ ಈ ಸಂದರ್ಭದಲ್ಲಿ ಹಾಜರಿದ್ದರು. ಕೋತಾಕೋಟಾ, ರೋಲುಗುಂಟ ಮತ್ತು ಮಕವರಪಾಳಂ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ 65 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 7 ಕೋಟಿ ರೂ. ಬೆಲೆಬಾಳುವ ಗಾಂಜಾವನ್ನು ನ್ಯಾಯಾಲಯದ ಅಗತ್ಯ ಅನುಮತಿ ಪಡೆದ ನಂತರ ಸುಟ್ಟು ಹಾಕಲಾಗಿದೆ ಎಂದು ಪೆÇಲೀಸ್ ಮಹಾ ನಿರೀಕ್ಷಕ ಶ್ರೀಕಾಂತ್ ತಿಳಿಸಿದ್ದಾರೆ. ಗಾಂಜಾ ಕಳ್ಳಸಾಗಣೆಗೆ ಕಡಿವಾಣ ಹಾಕುವ ಮೂಲಕ ಕಿಂಗ್‍ಪಿನ್‍ಗಳನ್ನು ಮಟ್ಟ ಹಾಕುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ