ಮುಂಬೈ, ಮಾ.13- ಬಾಲಿವುಡ್ನ ಖ್ಯಾತ ಗಾಯಕ ಹಾಗೂ ನಟ ಅದಿತ್ಯ ನಾರಾಯಣ್ ಅವರನ್ನು ವರ್ಸೋವಾ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ನಿನ್ನೆ ಆದಿತ್ಯ ನಾರಾಯಣ್ ತಮ್ಮ ಮರ್ಸಿಡಿಸ್ ಬೆಂಜ್ ಕಾರ್ನಲ್ಲಿ ಲೊಖಂಡವಾಲ ರಸ್ತೆಯಲ್ಲಿ ಯುಟರ್ನ್ ತೆಗೆದುಕೊಳ್ಳುವ ವೇಳೆ ಆಟೋರಿಕ್ಷಾಗೆ
ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದು ಆಕೆಯನ್ನು ಆದಿತ್ಯ ನಾರಾಯಣ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಸಂಬಂಧ ವರ್ಸೋವಾ ಠಾಣೆ ಪೆÇಲೀಸರು ಆದಿತ್ಯ ನಾರಾಯಣ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕಾರನ್ನು ತಪ್ಪಾಗಿ ಯುಟರ್ನ್ ತೆಗೆದುಕೊಂಡಿದ್ದರಿಂದಲೇ ಈ ಅಪಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಕ್ರಮಕೈಗೊಂಡಿದ್ದು ಆದಿತ್ಯ ಜಾಮೀನು ಪಡೆದು ಹೊರಬಂದಿದ್ದಾರೆ.
ಆದಿತ್ಯ ನಾರಾಯಣ್ ಬಾಲಿವುಡ್ನ ಖ್ಯಾತ ಗಾಯಕ ಉದಿತ್ ನಾರಾಯಣ್ರ ಮಗನಾಗಿದ್ದು ರಂಗೀಲಾದಲ್ಲಿ ಬಾಲನಟನಾಗಿ ನಟಿಸಿರುವುದೇ ಅಲ್ಲದೆ ಶಾಪಿಥ್ ಚಿತ್ರದ ನಾಯಕನಾಗಿಯೂ ನಟಿಸಿದ್ದಾನೆ. ಸೂಪರ್ಹಿಟ್ ಅಖೇಲೆ ಹಮ್ ಅಖೇಲೆ ತುಮ್ ಎಂಬ ಗೀತೆ ಅಲ್ಲದೆ ರಂಗೀಲಾ, ಪರ್ದೇಶ್, ಬೀವಿ ನಂ 1, ರಮ್ಲೀಲಾ ಸೇರಿದಂತೆ ಹಲವು ಜನಪ್ರಿಯ ಗೀತೆಗಳನ್ನು ಹಾಡಿದ್ದಾರೆ.