ಮುಂದಿನ ಚುನಾವಣೆಯಲ್ಲಿ ಸಂವಿಧಾನ ವಿರೋಧಿಗಳನ್ನು ಮತ್ತು ಮತಾಂಧರನ್ನು ಸೋಲಿಸಿ ಪ್ರಗತಿಪರ ಜಾತ್ಯತೀತ ವ್ಯಕ್ತಿಗಳನ್ನು ಗೆಲ್ಲಿಸಬೇಕಾದ ಅಗತ್ಯವಿದೆ. ಅಧ್ಯಕ್ಷ ಎ.ಕೆ.ಸುಬ್ಬಯ್ಯ

ಬೆಂಗಳೂರು,ಮಾ.13- ಮುಂದಿನ ಚುನಾವಣೆಯಲ್ಲಿ ಸಂವಿಧಾನ ವಿರೋಧಿಗಳನ್ನು ಮತ್ತು ಮತಾಂಧರನ್ನು ಸೋಲಿಸಿ ಪ್ರಗತಿಪರ ಜಾತ್ಯತೀತ ವ್ಯಕ್ತಿಗಳನ್ನು ಗೆಲ್ಲಿಸಬೇಕಾದ ಅಗತ್ಯವಿದೆ ಎಂದು ಸಂವಿಧಾನ ಉಳಿವಿಗಾಗಿ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಎ.ಕೆ.ಸುಬ್ಬಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಸಮಸ್ತಶೋಷಿತ ವರ್ಗಗಳ ಹಾಗೂ ಧಮನಿತ ಸಮುದಾಯದ ಪ್ರತಿನಿಧಿಯಾಗಿ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರು ಸ್ವಾತಂತ್ರ್ಯ ಸಮಾನತೆ, ಸಹೋದರತೆ ಮತ್ತು ನ್ಯಾಯವನ್ನು ಸಂವಿಧಾನದ ಆಶಯಗಳನ್ನಾಗಿ ಮಾಡಿದ್ದರು. ಈ ಆಶಯಗಳನ್ನು ವಿರೋಧಿಸುವ ಕಾಪೆರ್Çೀರೇಟ್ ಮತ್ತು ಮತಾಂಧ ಶಕ್ತಿಗಳು ಬೆಳೆಯುತ್ತಿವೆ ಎಂದರು.
ನಮ್ಮ ಸಂವಿಧಾನದ ಆಶಯಗಳು ದೇಶ ಉಳಿಸಬೇಕಾದರೆ ಮೊದಲು ಈ ವಿನಾಶಕಾರಿ ಶಕ್ತಿಗಳನ್ನು ಸೋಲಿಸಬೇಕಾಗಿದೆ. ಈಗಾಗಲೇ ಇವರು ಕೇಂದ್ರದ ಅಧಿಕಾರವನ್ನು ಹಿಡಿದಿರುವುದು ಅಷ್ಟೇ ಅಲ್ಲ ದೇಶದ 21 ರಾಜ್ಯಗಳಲ್ಲಿ ಆಳ್ವಿಕೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ಅಧಿಕಾರಕ್ಕೆ ಬಂದರೆ ಬಲಪಂಥೀಯ ಶಕ್ತಿಳಗೆ ಪ್ರತಿರೋಧ ಒಡ್ಡುತ್ತಿರುವ ದಕ್ಷಿಣ ರಾಜ್ಯಗಳನ್ನು ಕಬಳಿಸಲು ನಾವೇ ಸಹಾಯ ಮಾಡಿದಂತಾಗುತ್ತದೆ ದಿಡ್ಡಿ ಬಾಗಿಲು ತೆರೆದಂತಾಗುತ್ತದೆ. ಹಾಗಾಗಿ ಬಲಪಂಥೀಯ ಶಕ್ತಿಗಳು ಈ ಬಾರಿ ಬಲಗೊಳ್ಳದಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಈಗಾಗಲೇ ದೇಶ ಮತ್ತು ರಾಜ್ಯದ ಜನ ಸಂಘಷಗಳ ಹೊರೆಯಲ್ಲಿ ಸಿಲುಕಿ ನಲುಗಿ ಹೋಗಿದ್ದಾರೆ. ಒಂದೆಡೆ ಆದಾಯ ಕುಸಿದಿದೆ. ಖರ್ಚುಗಳು ಏರುತ್ತಳೇ ಇವೆ. ಸಾಲಗಳು ಕುತ್ತಿಗೆಗೆ ಬಂದು ನಿಂತಿವೇ. ಕೃಷಿ ನೆಲ ಕಚ್ಚಿದೆ. ಕೆಲಸದ ಭದ್ರತೆ ಇಲ್ಲವಾಗಿದೆ.ದುರ್ಬಲರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಭ್ರಷ್ಟಾಚಾರ ಮಿತಿ ಮೀರಿ ಬೆಳೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ದೇಶದಲ್ಲಿ ಉಳಿಗಾಲವಿಲ್ಲ ಎಂಬ ಪರಿಸ್ಥಿತಿ ಬಂದೊದಗಲಿದೆ. ಹಾಗಾಗಿ ಜನಸಾಮಾನ್ಯರಾದ ನಾವು ಚುನಾವಣೆಯನ್ನು ಸವಾಲಾನ್ನಾಗಿ ಸ್ವೀಕರಿಸಬೇಕಿದೆ. ಈ ದೇಶದ ನಡಿಗೆಯ ದಿಕ್ಕನ್ನು ಜನಮುಖಿಯಾಗಿ ತಿರುಗಿಸಲು ಹೊಸ ಹಾಗೂ ದಿಟ್ಟ ಹೆಜ್ಜೆ ಇಡಬೇಕು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ