ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯದವರಿಗೆ ರಾಜ್ಯದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ಸ್ಪರ್ಧಿಸಲು ಆದ್ಯತೆ ನೀಡಬೇಕೆ. ಎಂ.ಸಿ.ಶ್ರೀನಿವಾಸ್

ಬೆಂಗಳೂರು,ಮಾ.13- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯದವರಿಗೆ ರಾಜ್ಯದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ
ಸ್ಪರ್ಧಿಸಲು ಆದ್ಯತೆ ನೀಡಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಸಿ.ಶ್ರೀನಿವಾಸ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲಮಂಗಲ ಗ್ರಾಮಾಂತರ, ದೇವನಹಳ್ಳಿ, ಮಹದೇವಪುರ ಮತ್ತು ಬಿಬಿಎಂಪಿ ವ್ಯಾಪ್ತಿ ಆನೇಕಲ್,ಸಿ.ವಿ.ರಾಮನ್‍ನಗರ, ಪುಲಿಕೇಶಿನಗರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 20ಲಕ್ಷ ಮಾದಿಗ ಜನಾಂಗದವರು ಇದ್ದಾರೆ. ಆದ್ದರಿಂದ ಮಾದಿಗ ಸಮುದಾಯದಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು. ಮಹಾನಗರಪಾಲಿಕೆಯಲ್ಲಿ 198 ವಾರ್ಡ್‍ಗಳಲ್ಲಿ ಸುಮಾರು 18 ಸಾವಿರ ಜನ ಪೌರ ಕಾರ್ಮಿಕರಿದ್ದು , ಬೆಂಗಳೂರು ನಗರಕ್ಕೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂದಿರುವ ಹಲವಾರು ಹೆಸರುಗಳಿಗೆ ದಂಡೋರ ಮಾದಿಗ ಸಮಿತಿಯೇ ಕಾರಣವಾಗಿದೆ. ಆದ್ದರಿಂದ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು. ಜಿಲ್ಲಾ ಸಂಚಾಲಕರಾದ ಟಿ.ನಾರಾಯಣಸ್ವಾಮಿ, ಪ್ರಧಾನಕಾರ್ಯದರ್ಶಿ ತ್ರಿಲೋಕ್ ಚಂದರ್, ವಕ್ತಾರರಾದ ದಾಸ್ ಮುಂತಾದವರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ