ಮುಂಬೈ, ಮಾ.12- ಇಂಡಿಗೋ ವಿಮಾನ ಮತ್ತೊಮ್ಮೆ ವೈಫಲ್ಯದಿಂದ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಲಖನೌಗೆ ತೆರಳುತ್ತಿದ್ದ ಈ ಸಂಸ್ಥೆಯ ವಿಮಾನದ ಎಂಜಿನ್ ಗಗನದಲ್ಲೇ ಕೈಕೊಟ್ಟ ಕಾರಣ ತಕ್ಷಣ ಅಹಮದಾಬಾದ್ಗೆ ಮರಳಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಏರ್ಬಸ್-ಎ320 ವಿಮಾನದಲ್ಲಿ 186 ಪ್ರಯಾಣಿಕರಿದ್ದರು. ಇವರೆಲ್ಲ ಸುರಕ್ಷಿತ ಭೂ ಸ್ಪರ್ಶ ಮಾಡಿದ್ದಾರೆ ಎಂದು ಅಹಮದಾಬಾದ್ ವಿಮಾನ ನಿಲ್ದಾಣ ನಿರ್ದೇಶಕ ಮನೋಜ್ ಗಂಗಲ್ ತಿಳಿಸಿದ್ದಾರೆ.
ಅಹಮದಾಬಾದ್ನಿಂದ ಲಖನೌಗೆ ತೆರಳಲು ಮೇಲೇರಿದ 40 ನಿಮಿಷಗಳ ಬಳಿಕ ವಿಮಾನದ ಎಂಜಿನ್ನಲ್ಲಿ ದೋಷ ಕಾಣಿಸಿಕೊಂಡಿತ್ತು. ತಕ್ಷಣ ಪೈಲೆಟ್ ವಿಮಾನವನ್ನು ಅಹಮದಾಬಾದ್ನಲ್ಲಿ ಭೂ ಸ್ಪರ್ಶ ಮಾಡಿಸಿದರು.