ಲಾಹೋರ್:ಮಾ-11: ಸೆಮಿನಾರ್ ವೊಂದರಲ್ಲಿ ಮಾತನಾಡುತ್ತಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮೇಲೆ ಶೂ ಎಸೆದಿರುವ ಘಟನೆ ನಡೆದಿದೆ.
ಲಾಹೋರ್ನಲ್ಲಿ ಇಂದು ನಡೆದ ಇಸ್ಲಾಮಿಕ್ ಸೆಮಿನಾರ್ ಕಾರ್ಯಕ್ರಮದಲ್ಲಿ ಧಾರ್ಮಿಕ ಉಗ್ರಗಾಮಿ ಓರ್ವ ಶರೀಫ್ ಮೇಲೆ ಶೂ ಎಸೆದಿದ್ದಾನೆ. ಪಾಕ್ ವಿದೇಶಾಂಗ ಸಚಿವ ಖ್ವಾಜಾ ಆಸೀಫ್ ಮುಖಕ್ಕೆ ಕಪ್ಪು ಮಸಿ ಎರಚಿದ ಮರುದಿನವೇ ಪಾಕ್ ಮಾಜಿ ಪ್ರಧಾನಿ ಮೇಲೆ ಶೂ ಬಿದ್ದಿದೆ.
ಸೆಮಿನಾರ್ ಕಾರ್ಯಕ್ರಮದಲ್ಲಿ ಶರೀಫ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ತಮ್ಮ ಅತಿಥಿ ಭಾಷಣ ಮಾಡಲು ಡಯಾಸ್ನತ್ತ ತೆರಳುತ್ತಿದ್ದ ವೇಳೆ ಓರ್ವ ವಿದ್ಯಾರ್ಥಿ ಶೂ ಎಸೆದಿದ್ದು, ಅದು ಶರೀಫ್ ಅವರ ಭುಜ ಹಾಗೂ ಕಿವಿಗೆ ತಾಗಿದೆ.
ಹಾಗೆಯೇ ಅದೇ ವಿದ್ಯಾರ್ಥಿಯು ಶರೀಫ್ ಮುಂದೆ ಹೋಗಿ ಲಬೈಕ್ ಯಾ ರಸೂಲ್ಹಾ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾನೆ. ಬಳಿಕ ವಿದ್ಯಾರ್ಥಿಯನ್ನು ಅಲ್ಲಿದವರು ಥಳಿಸಿದ್ದಾರೆ. ಭದ್ರತಾ ಸಿಬ್ಬಂದಿ ವಿದ್ಯಾರ್ಥಿ ಹಾಗೂ ಆತನ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Shoe thrown,former PM Nawaz Sharif,Lahore