ಮೈಸೂರು, ಮಾ.10- ನಗರದ ಹೃದಯ ಭಾಗದಲ್ಲಿ ಎಟಿಎಂ ದೋಚಲು ವಿಫಲ ಯತ್ನ ನಡೆದಿದೆ.
ಕೆ.ಆರ್.ವೃತ್ತದಲ್ಲಿರುವ ವಿಜಯಬ್ಯಾಂಕ್ ಎಟಿಎಂನಲ್ಲಿ ಹಣ ದೋಚಲು ಮುಂದಾಗಿ ಕಳ್ಳರು ವಿಫಲರಾಗಿದ್ದಾರೆ.
ಇಂದು ಬೆಳಗ್ಗೆ ವಿಜಯಬ್ಯಾಂಕ್ ಎಟಿಎಂ ಎದುರಿಗಿರುವ ಹೋಟೆಲ್ ಮಾಲೀಕರು ಹೋಟೆಲ್ ಬಾಗಿಲು ತೆರೆಯಲು ಬಂದಾಗ ಎಟಿಎಂ ಬಾಗಿಲು ತೆರೆದಿರುವುದು ಕಂಡು ಬಂದಿದೆ.
ಅನುಮಾನಗೊಂಡು ಹತ್ತಿರ ಬಂದು ನೋಡಿದಾಗ ಎಟಿಎಂ ಮಿಷನ್ ಕಳವಿಗೆ ಯತ್ನಿಸಿರುವುದು ಕಂಡು ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ದೇವರಾಜ ಠಾಣೆ ಪೆÇಲೀಸರು ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.
ಸಿಸಿಬಿಯ ಎಸಿಪಿ ಲಿಂಗಪ್ಪ ಮತ್ತು ಬ್ಯಾಂಕ್ ಅಧಿಕಾರಿಗಳು ಭೇಟಿ ನೀಡಿದ್ದು, ಎರಡು ಸಿಸಿ ಕ್ಯಾಮೆರಾ ಪುಟೇಜ್‍ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.