ಬಾಗಲಕೋಟೆ, ಮಾ.10-ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಿವೃತ್ತ ಉಪಲೋಕಾಯುಕ್ತ ಸುಭಾಷ್ ಬಿ. ಅಡಿ ಲೋಕಾಯುಕ್ತ ಕಚೇರಿಗೆ ಸೂಕ್ತ ಭದ್ರತೆ ಇದ್ದಿದ್ದರೆ ಈ ರೀತಿ ನಡೆಯುತ್ತಿರಲಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಸೇರಿದಂತೆ ಪ್ರಮುಖ ಕಟ್ಟಡಗಳಿಗೆ ಭದ್ರತೆ ಅಗತ್ಯವಿದೆ. ಆದರೆ ಲೋಕಾಯುಕ್ತ ಕಚೇರಿ ಇರುವುದೇ ಜನರಿಗಾಗಿ. ಜನರನ್ನು ಕಚೇರಿಯಿಂದ ದೂರ ಇಡುವುದು ಸರಿಯಲ್ಲ ಎಂದರು.
ಹೀಗಾಗಿ ಜನರ ಭೇಟಿಗೂ ಅವಕಾಶ ನೀಡಬೇಕು, ಅದರೊಂದಿಗೆ ಸೂಕ್ತ ಭದ್ರತಾ ವ್ಯವಸ್ಥೆಯೂ ಕಲ್ಪಿಸಬೇಕು ಎಂದರು.
ಭದ್ರತಾ ಲೋಪದಿಂದಲೇ ಈ ಪ್ರಕರಣ ನಡೆದಿದೆ. ಹಾಗಾಗಿ ಲೋಕಾಯುಕ್ತ ಕಚೇರಿ ಸೇರಿದಂತೆ ಕಟ್ಟಡಗಳಿಗೆ ಭದ್ರತೆ ಒದಗಿಸಬೇಕಿದೆ ಎಂದು ಆಭಿಪ್ರಾಯಪಟ್ಟರು.