ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು ವೈದ್ಯರೊಬ್ಬರನ್ನು ಬೆದರಿಸಿ ಕತ್ತಿನ ಬಳಿ ಗಾಯಗೊಳಿಸಿ ಮೊಬೈಲ್ ಹಾಗೂ 20 ಸಾವಿರ ಹಣವಿದ್ದ ಪರ್ಸ್ ಕಸಿದುಕೊಂಡು ಪರಾರಿ

ಬೆಂಗಳೂರು, ಮಾ.10- ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು ವೈದ್ಯರೊಬ್ಬರನ್ನು ಬೆದರಿಸಿ ಕತ್ತಿನ ಬಳಿ ಗಾಯಗೊಳಿಸಿ ಮೊಬೈಲ್ ಹಾಗೂ 20 ಸಾವಿರ ಹಣವಿದ್ದ ಪರ್ಸ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಆರ್‍ಎಂಸಿ ಯಾರ್ಡ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ರಮೇಶ್ ಕಿನಾಲ್ ಎಂಬುವರು ನಿನ್ನೆ ರಾತ್ರಿ 11.45ರ ಸಮಯದಲ್ಲಿ ದಾವಣಗೆರೆಗೆ ಹೋಗುವ ಸಲುವಾಗಿ ರಿಲಯನ್ಸ್ ಫ್ರೆಶ್ ಹಿಂಭಾಗದ ಗೋವರ್ಧನ್ ಚಿತ್ರಮಂದಿರ ಬಳಿ ವಾಹಕ್ಕಾಗಿ ಕಾಯುತ್ತಾ ನಿಂತಿದ್ದರು.
ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು ಇವರ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಡಾ.ರಮೇಶ್ ಅವರು ಪ್ರತಿರೋಧ ವ್ಯಕ್ತಪಡಿಸಿದಾಗ ಅವರ ಕತ್ತಿನ ಬಳಿ ಗಾಯಗೊಳಿಸಿ ಮೊಬೈಲ್ ಹಾಗೂ 20 ಸಾವಿರ ಹಣವಿದ್ದ ಪರ್ಸ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ಆರ್‍ಎಂಸಿ ಯಾರ್ಡ್ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರಿಗಾಗಿ ಶೋಧ ಕೈಗೊಂಡಿದ್ದಾರೆ.
ಗಾರ್ಮೆಂಟ್ಸ್ ನೌಕರನ ಮೊಬೈಲ್ ದರೋಡೆ:
ಗಾರ್ಮೆಂಟ್ಸ್ ನೌಕರರೊಬ್ಬರನ್ನು ಡ್ರಾಪ್ ನೆಪದಲ್ಲಿ ತಡೆದು ನಿಲ್ಲಿಸಿದ ದರೋಡೆಕೋರರು ಬೆದರಿಸಿ 3 ಸಾವಿರ ಹಣ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಬೊಮ್ಮನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಾರ್ವೆಬಾವಿಪಾಳ್ಯದ ನಿವಾಸಿ ರವಿ ಎಂಬುವರು ಗಾರ್ಮೆಂಟ್ಸ್ ನೌಕರರಾಗಿದ್ದು, ಬೆಳಗಿನ ಜಾವ 3.30ರಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದರು.
ಈ ವೇಳೆ ಜ್ಞಾನಜ್ಯೋತಿ ಸೆಕ್ಟರ್ ಬಳಿ ಡ್ರಾಪ್ ನೆಪದಲ್ಲಿ ದರೋಡೆಕೋರರು ರವಿ ಅವರ ಬೈಕನ್ನು ತಡೆದು ನಿಲ್ಲಿಸಿದ್ದಾರೆ.
ಬೈಕ್ ನಿಲ್ಲಿಸುತ್ತಿದ್ದಂತೆ ಇವರನ್ನು ಬೆದರಿಸಿದ ದರೋಡೆಕೋರರು ಬೆದರಿಸಿ 3 ಸಾವಿರ ಹಣ ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.
ಈ ಸಂಬಂಧ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ