ಥಾಣೆ, ಮಾ.10- ತನ್ನ ಪತ್ನಿ ಮೇಲೇ ಗೂಢಚಾರಿಕೆ ಮಾಡಿದ ಆರೋಪದಲ್ಲಿ ಬಾಲಿವುಡ್‍ನ ಬಹು ಬೇಡಿಕೆ ನಟ ನವಾಜುದ್ಧೀನ್ ಸಿದ್ಧಿಖಿ ಈಗ ಸಂಕಷ್ಟಕ್ಕೆ ಸಿಲುಕಿದ್ದು, ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.
ಅಕ್ರಮವಾಗಿ ತನ್ನ ಪತ್ನಿಯ ಫೆÇೀನ್ ಕರೆಗಳ ಮಾಹಿತಿ ಪಡೆದಿರುವ ನಟನನ್ನು ಥಾಣೆ ಪೆÇಲೀಸರು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.
ಭಾರೀ ಮೊತ್ತಕ್ಕೆ ಪ್ರತಿಯಾಗಿ ವೈಯಕ್ತಿಕ ಫೆÇೀನ್ ಕರೆಗಳ ಮಾಹಿತಿ ನೀಡುತ್ತಿದ್ದ ಜಾಲವೊಂದನ್ನು ಥಾಣೆ ಪೆÇಲೀಸರು ಭೇದಿಸಿ ಸಂಬಂಧಿಸಿದ ಅಧಿಕಾರಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ನವಾಜ್ ಹೆಸರೂ ಕೇಳಿಬಂದಿತು.
ಅವರು ತಮ್ಮ ಪತ್ನಿಯ ವೈಯಕ್ತಿಕ ಫೆÇೀನ್ ಕರೆ ಮಾಹಿತಿಯನ್ನು ನೀಡುವಂತೆ ಅವರ ವಕೀಲರ ಮೂಲಕ ನಮ್ಮನ್ನು ಸಂಪರ್ಕಿಸಿ ಭಾರೀ ಹಣ ನೀಡಿದರು. ನಾವು ಅದಕ್ಕೆ ಸಂಬಂಧಪಟ್ಟ ಫೆÇೀನ್ ಕಾಲ್ ವಿವರಗಳನ್ನು ಅವರಿಗೆ ನೀಡಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ.
ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅನುಮತಿ ಮೇರೆಗೆ ವ್ಯಕ್ತಿಗಳ ವೈಯಕ್ತಿಕ ಫೆÇೀನ್ ಕರೆಗಳನ್ನು ಪಡೆಯಲು ಅವಕಾಶ ಇದೆ. ಆದರೆ ಅಡ್ಡ ಮಾರ್ಗದಲ್ಲಿ ಈ ರೀತಿ ವಿವರಗಳನ್ನು ಸಂಗ್ರಹಿಸುವುದು ಕಾನೂನಿನಲ್ಲಿ ಅಪರಾಧ. ಈ ಸಂಬಂಧ ನವಾಜ್‍ಗೆ ಪೆÇಲೀಸರು ನೋಟಿಸ್ ಕಳುಹಿಸಿ ವಿಚಾರಣೆಗೆ ಬರುವಂತೆ ತಿಳಿಸಿದ್ದರೂ, ಬಾಲಿವುಡ್ ನಟ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಪೆÇಲೀಸರು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.
ಪತ್ನಿಯ ಫೆÇೀನ್ ಕರೆಗಳ ವಿವರಗಳನ್ನು ಅಕ್ರಮವಾಗಿ ಸಂಗ್ರಹಿಸಿ ಆಕೆಯ ಮೇಲೆ ಬೇಹುಗಾರಿಕೆ ನಡೆಸುವ ಅಗತ್ಯ ಏನಿತ್ತು? ಇದರ ಹಿಂದಿನ ಉದ್ದೇಶ ಏನು ? ಇತ್ಯಾದಿ ಬಗ್ಗೆ ನವಾಜ್‍ನಿಂದ ಪೆÇಲೀಸರು ಮಾಹಿತಿ ಪಡೆಯಲಿದ್ದು, ನಟನಿಗೆ ನಟನಿಗೆ ಸಂಕಷ್ಟ ಎದುರಾಗಿದೆ.