ಚಿಕ್ಕಮಗಳೂರು, ಮಾ.10-ಪ್ರಖ್ಯಾತ ಅಮೆಜಾನ್ ಕಂಪೆನಿಗೆ ಒಂದು ಕೋಟಿಗೂ ಹೆಚ್ಚು ಹಣವನ್ನು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಕಾಳಿದಾಸ ನಗರದ ದರ್ಶನ್, ತೇಜು, ತೀರ್ಥ ಮತ್ತು ಗೌರಿ ಕಾಲುವೆ ಬಡಾವಣೆಯ ಅನಿಲ್, ಸಚ್ಚಿನ್, ಕಲ್ಯಾಣ ನಗರದ ಪುನೀತ್ ಎಂಬುವರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಇವರುಗಳ ಮನೆ ಮೇಲೆ ದಾಳಿ ನಡೆಸಿ 2 ಗೋಣಿಚೀಲದಷ್ಟು ದುಬಾರಿ ಶೂಗಳು, ದುಬಾರಿ ಬೆಲೆಯ ಸೀರೆಗಳು, ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಮೆಜಾನ್ ನಗರದ ಹಾಲೇನಾಹಳ್ಳಿಯಲ್ಲಿ ಶಾಖಾ ಕಚೇರಿ ಇದ್ದು, ಇಲ್ಲಿ ವಶಕ್ಕೆ ಪಡೆಯಲಾಗಿರುವ ಆರು ಮಂದಿ ಸೇಲ್ಸ್ಮೆನ್ ಆಗಿ ಕೆಲಸ ಮಾಡುತ್ತಿದ್ದರು.
ನಗರಕ್ಕೆ ಬರುವ ಕಂಪೆನಿಯ ಸಾಮಾನುಗಳನ್ನು ಮಾರಾಟ ಮಾಡಿದ ಹಣ ಕಂಪೆನಿಗೆ ಜಮಾ ಆಗಿಲ್ಲದಿರುವುದು ಕಂಪೆನಿ ಆಡಿಟ್ನಲ್ಲಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಸಂಸ್ಥೆ ಶಾಖಾ ವ್ಯವಸ್ಥಾಪಕ ಪೆÇಲೀಸರಿಗೆ ದೂರು ನೀಡಿದ್ದರು.
ಪ್ರಮುಖ ಆರೋಪಿ ದರ್ಶನ್ ಕಾಳಿದಾಸ ನಗರದಲ್ಲಿ ಮನೆ ಬಾಡಿಗೆಗೆ ಪಡೆದು ದುಬಾರಿ ಬೆಲೆಯ ವಸ್ತುಗಳನ್ನು ಸಂಬಂಧಿಕರ ಹೆಸರಿನಲ್ಲಿ ತರಿಸಿ ಅವುಗಳನ್ನು ತಾವೇ ಸ್ವತಃ ಬಳಸಿಕೊಳ್ಳುತ್ತಿದ್ದ ಹಾಗೂ ಸಂಬಂಧಿಕರಿಗೂ ನೀಡುತ್ತಿದ್ದ.
ಅಮೆಜಾನ್ ಹೆಸರಿನಲ್ಲಿ ನಕಲಿ ಸ್ವೀಪ್ಕಾರ್ಡ್ ಸಿದ್ಧಪಡಿಸಿ ಆ ದಿನದ ಹಣ ಸಂಸ್ಥೆಗೆ ಜಮಾ ಆಗಿದೆ ಎಂದು ನಂಬಿಕೆ ಬರುವಂತೆ ನೋಡಿಕೊಂಡಿದ್ದ
ಸಂಸ್ಥೆಯ ಡಾಟಾದಲ್ಲಿ ಹಣ ಬಂದಿದೆ ಎಂದು ದಾಖಲಾಗುತ್ತಾ ಹೋಗಿದೆ. ಅಲ್ಲದೆ, ಬೇರೆ ಬೇರೆ ಗ್ರಾಹಕರು ತರಿಸಿಕೊಂಡ ವಸ್ತುಗಳ ಹಣ ಇದೇ ರೀತಿ ನಕಲಿ ಸ್ವೀಪ್ ಮಾಡಿ ಹಣವನ್ನು ಲಪಟಾಯಿಸಿದ್ದಾನೆ.
ದರ್ಶನ್ ಜೊತೆಯಲ್ಲಿ ಸೇಲ್ಸ್ಮೆನ್ ಆಗಿ ಕೆಲಸ ಮಾಡುತ್ತಿದ್ದ ಉಳಿದ ಐವರು ದುಬಾರಿ ಬೆಲೆಯ ವಸ್ತುಗಳನ್ನು ಉಪಯೋಗಿಸಿಕೊಳ್ಳುತ್ತಿರುವ ಬಗ್ಗೆ ಅರಿವಿದ್ದರೂ ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿದ್ದರು.
ಚಿಕ್ಕಮಗಳೂರು ನಗರ ಠಾಣೆ ಮತ್ತು ಬಸವಹಳ್ಳಿ ಠಾಣಾ ಪೆÇಲೀಸರು ಏಕಕಾಲದಲ್ಲಿ ಈ ಆರು ಮಂದಿ ಮನೆ ಮೇಲೆ ದಾಳಿ ನಡೆಸಿ ದುಬಾರಿ ವಸ್ತುಗಳನ್ನು ವಶಪಡಿಸಿಕೊಂಡು ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.