ಪಂಜಾಬಿ ಸೂಫಿ ಸಂಗೀತದಲ್ಲಿ ಖ್ಯಾತರಾಗಿದ್ದ ಉಸ್ತಾದ್ ಪ್ಯಾರೇಲಾಲ್ ವಾಡಿಯಾಲ್ ಅವರು ಹೃದಯಾಘಾತದಿಂದ ನಿಧನ

ನವದೆಹಲಿ, ಮಾ. 9- ಪಂಜಾಬಿ ಸೂಫಿ ಸಂಗೀತದಲ್ಲಿ ಖ್ಯಾತರಾಗಿದ್ದ ಉಸ್ತಾದ್ ಪ್ಯಾರೇಲಾಲ್ ವಾಡಿಯಾಲ್ ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ ಅಮೃತಸರದ ಪೆÇೀರ್ಟಿಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಿನ್ನೆ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಫೆÇೀರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಪ್ಯಾರೇಲಾಲ್ ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ವಾಡಾಲಿ ಸೋದರರೆಂದೇ ಖ್ಯಾತರಾಗಿದ್ದ ಉಸ್ತಾದ್ ಪ್ಯಾರೇಲಾಲ್ ಹಾಗೂ ಉಸ್ತಾದ್ ಪೂರ್ಣಚಂದ್ ಸೋದರರು ಅಮೃತಸರದ ಹಾರ್‍ಬಲ್ಲಾ ದೇಗುಲದಲ್ಲಿ ತಮ್ಮ ಸಂಗೀತ ಪಯಣವನ್ನುಆರಂಭಿಸಿ ನಂತರ ಕಾಫಿನ್, ಗಜಲ್, ಭಜನ್ಸ್‍ಗಳ ಮೂಲಕ ಗಮನ ಸೆಳೆದಿದ್ದರು.
ಬಾಲಿವುಡ್ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದ ಈ ಸೋದರರು ತನು ವೆಟ್ಸ್ ಮನು ಚಿತ್ರಕ್ಕಾಗಿ ಆಯೇ ರಂಗ್‍ರಾಜ್ ಮೇರೆ, ಮೌಸಮ್ ಸಿನಿಮಾದ ಈಕ್ ತು ಹಿ ತು ಹೈ, ತು ಮಾನೆ ಯಾ ನಾ ಮಾನೆ ಸೇರಿದಂತೆ ಪಿಂಜಾರ್, ದೂಪ್,ಚುಕು ಬುಕು ಮುಂತಾದ ಚಿತ್ರಗಳ ಗೀತೆಗಳಿಗೆ ತಮ್ಮ ಸುಶ್ರಾವ್ಯ ಕಂಠವನ್ನು ಧಾರೆ ಎಳೆದಿದ್ದರು.
ಈ ಸೋದರರಿಗೆ ಸಂಗೀತ್ ನಾಟಕ್ ಅಕಾಡೆಮಿ ಪ್ರಶಸ್ತಿ, ತುಳಸಿ ಪ್ರಶಸ್ತಿ, ಪಂಜಾಬಿ ಸಂಗೀತ್ ನಾಟಕ್ ಅಕಾಡೆಮಿ ಪ್ರಶಸ್ತಿ, ಜೀವಮಾನ ಪ್ರಶಸ್ತಿ ಅಲ್ಲದೆ, ಉಸ್ತಾದ್ ಪ್ಯಾರೇಲಾಲ್‍ರ ಸೋದರ ಪೂರ್ಣಚಂದ್ ವಾಡಾಲಿಗೆ ಪದ್ಮಶ್ರೀ ಪ್ರಶಸ್ತಿಗಳು ಲಭಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ