ಈಸ್ಟರ್ನ್ ಭೂಮಿಕಾ ಐಕಾನಿಕ್ ವುಮೆನ್ ಆಫ್ ಯುವರ್ ಲೈಫ್ ಪ್ರಶಸ್ತಿ ಪ್ರದಾನ

ಬೆಂಗಳೂರು,ಮಾ.9- ಮಹಿಳಾ ದಿನಾಚರಣೆಯ ಪ್ರಯುಕ್ತ ಈಸ್ಟರ್ನ್ ಕಾಂಡಿಮೆಂಟ್ಸ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಮನಸೆಳೆದ ಹಾಗೂ ಇತರರಿಗೆ ಮಾದರಿಯಾದ ಸಾಮಾನ್ಯ ಮಹಿಳೆಯರನ್ನು ಗುರುತಿಸಿ ಈಸ್ಟರ್ನ್ ಭೂಮಿಕಾ ಐಕಾನಿಕ್ ವುಮೆನ್ ಆಫ್ ಯುವರ್ ಲೈಫ್ ಪ್ರಶಸ್ತಿ ನೀಡಿ ಗೌರವಿಸಿತು.
ಬೆಂಗಳೂರಿನ ದವನಂ ಸರೋವರ ಪೆÇರ್ಟಿಕೊ ಸೂಟ್ಸ್‍ನಲ್ಲಿ ನಡೆದ ಈಸ್ಟರ್ನ್ ಭೂಮಿಕಾ ನಾಲ್ಕನೇ ಆವೃತ್ತಿಯಲ್ಲಿ ಸಂಘಮಿತ್ರ ಅಯ್ಯಂಗಾರ್, ಭಾಗ್ಯ ರಂಗಚಾರ್, ಡಾ|| ದೀಪಾ ಕಣ್ಣನ್, ಎಸ್.ಚಂದ್ರರಾಮತಿರಾವ್; ಪದ್ಮಾಜ ರಾಮಮೂರ್ತಿ, ವಿಧ್ಯಾ ವೈ. ಶಿಲ್ಪಾ , ಅಶ್ವಿನಿ ಅಂಗಡಿ, ಡೈಸಿ ಜೋಸೆಫ್ ಅಮ್ಮಜಿ ಮತ್ತು ರುಕ್ಸಾನಾ ಅವರಿಗೆ ಪ್ರಶಸ್ತಿ ನೀಡಲಾಯಿತು.
ವಿಕ್ರಂ ಆಸ್ಪತ್ರೆಯ ಕನ್ಸಲ್ಟೆಂಟ್ ಫಿಜಿಷಿಯನ್ ಡಾ.ಕೆ.ಎಸ್.ಮಂಜುನಾಥ್ ಮಾತನಾಡಿ, ಈಸ್ಟರ್ನ್ ಪರವಾಗಿ ಕುದೂರಿನ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ 10 ಕಂಪ್ಯೂಟರ್‍ಗಳನ್ನು ನೀಡಿ, ಶಾಲೆಯ ನವೀಕರಣ ಕಾರ್ಯ ಕೈಗೊಳ್ಳಲಾಗುವುದು ಎಂದರು.
ವಿಜೇತ ಮಹಿಳೆಯರಿಗೆ ನೃತ್ಯಪಟು, ಚಲನಚಿತ್ರ ಕಲಾವಿದೆ ಲಕ್ಷ್ಮೀ ಗೋಪಾಲಸ್ವಾಮಿ ಸ್ಮರಣ ಫಲಕ ನೀಡಿದರೆ, ಡಾ. ಗ್ಲೋರಿ ಅಲೆಕ್ಸಾಂಡರ್ (ಸಂಸ್ಥಾಪಕ, ಆಶಾ ಪ್ರತಿಷ್ಠಾನ) ವಿಜಯಶಾಲಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಶ್ರೀಧರ ಪಬ್ಬಿಶೆಟ್ಟಿ (ಸಿಇಒ, ನಮ್ಮ ಬೆಂಗಳೂರು ಪ್ರತಿಸ್ಥಾನ) , ಫಿರ್ಜೊಮಿರನ್ (ಎಂ.ಡಿ, ಈಸ್ಟರ್ನ್ ಸಮೂಹ) ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ