ಚಿಕ್ಕಮಗಳೂರು,ಮಾ.8- ಅಪ್ರಾಪ್ತೆಯನ್ನು ಅಪಹರಿಸಿ ವಿವಾಹವಾಗಿ ಅತ್ಯಚಾರ ಎಸಗಿದ್ದ ಕಾಮುಕನಿಗೆ ಮೈಸೂರಿನ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಟಿ.ನರಸೀಪುರದ ವಿನಾಯಕ ಬಡಾವಣೆ ನಿವಾಸಿ ಯೋಗೀಶ್(26) ಏಳು ವರ್ಷಗಳ ಜೈಲು ಶಿಕ್ಷೆ ನೀಡಲಾಗಿದೆ.
2012ರ ಮಾರ್ಚ್ 3ರಂದು ರಾತ್ರಿ ಬಾಲಕಿ ಶೌಚಕ್ಕೆ ತೆರಳಿದ್ದಾಗ ಯೋಗೀಶ್ ಆಕೆಯನ್ನು ಅಪಹರಿಸಿ ಮಾ.25ರಂದು ರಾಮನಗರದ ಕೆಂಗಲ್ ಹನುಮಂತಯ್ಯ ದೇವಸ್ಥಾನದಲ್ಲಿ ವಿವಾಹವಾಗಿದ್ದ.
ನಂತರ ಆತ ಅಪ್ರಾಪ್ತೆಯನ್ನು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಕ್ಕೆ ಕರೆದೊಯ್ದು ಅತ್ಯಾಚಾರ ವೆಸಗಿದ್ದ. ಈ ಸಂಬಂಧ ಬಾಲಕಿಯ ಪೆÇೀಷಕರು ನೀಡಿದ ದೂರಿನ ಮೇರೆಗೆ ಟಿ.ನರಸೀಪುರ ಪೆÇಲೀಸರು ದೂರು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ಮೈಸೂರಿನ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿಚಾರಣೆ ನಡೆಸಿ ಯೋಗೀಶನ ವಿರುದ್ದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆತನಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಸರ್ಕಾರದ ಪರವಾಗಿ ಅಭಿಯೋಜಕ ಮಹಂತಪ್ಪ ವಾದ ಮಂಡಿಸಿದರು.