ಭಾರತದಲ್ಲಿ ಮಹಿಳೆಯರ ಸಾಧನಾ ಶಕ್ತಿ ಹೆಚ್ಚಾಗುತ್ತಿದೆ: ಮಂಜುಳಾ ಗೋವರ್ಧನ್
ಬೆಂಗಳೂರು, ಮಾ.8- ಇಡೀ ವಿಶ್ವದಲ್ಲೇ ಮಹಿಳೆಯರ ಸಾಮಥ್ರ್ಯ ಪ್ರಜ್ವಲಿಸುತ್ತಿದೆ. ಅಂತರಿಕ್ಷದಿಂದ ಹಿಡಿದು ಕಡಿದಾಳದವರೆಗಿನ ಎಲ್ಲಾ ಸಾಹಸಮಯ ಜತೆಗೆ ಆವಿಷ್ಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡು ಬೆಳೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಕೇತ ಎಂದು ಕೆಪಿಸಿಸಿ ಮಹಿಳಾ ಘಟಕ ಕಾರ್ಯದರ್ಶಿ ಮಂಜುಳಾ ಗೋವರ್ಧನ್ ಹೇಳಿದ್ದಾರೆ.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಡೆದಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಮಹಿಳೆಯರ ಸಾಧನಾ ಶಕ್ತಿ ಹೆಚ್ಚಾಗುತ್ತಿದೆ. ಇದೊಂದು ಆಶಾವಾದ ವಾತಾವರಣ. ರಾಜಕೀಯದಲ್ಲೂ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಿ ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲು ಸಂಕಲ್ಪ ತೊಡುವ ಯುವ ಮಹಿಳಾ ಸಮುದಾಯ ಮುಂದೆ ಬರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಯಾವುದೇ ಅಡೆತಡೆಗಳಿಗೆ ಅಂಜದೆ ತನ್ನ ಗುರಿ ಸಾಧನೆಯತ್ತ ಮುನ್ನುಗ್ಗಬೇಕು ಎಂದು ಕರೆ ನೀಡಿದ್ದಾರೆ.