ಮೊದಲ ಬಾರಿಗೆ ಮೃಗಾಲಯದ ಪ್ರಾಣಿಗಳನ್ನು ರೈಲಿನ ಮೂಲಕ ರವಾನೆ

ಮೈಸೂರು, ಮಾ.8- ಇದೇ ಮೊದಲ ಬಾರಿಗೆ ಮೃಗಾಲಯದ ಪ್ರಾಣಿಗಳನ್ನು ರೈಲಿನ ಮೂಲಕ ರವಾನೆ ಮಾಡಲಾಗುತ್ತಿದೆ.
ನಗರದ ಶ್ರೀ ಜಯಚಾಮರಾಜೇಂದ್ರ ಮೃಗಾಲಯದ ಒಂದು ಹುಲಿ, ಎರಡು ಜಿಂಕೆ ಸೇರಿದಂತೆ ಕೆಲ ಪ್ರಾಣಿಗಳನ್ನು ಪ್ರಾಣಿ ವಿನಿಮಯ ಪ್ರಕಾರ ಆಸ್ಸೋಂ ಮೃಗಾಲಯಕ್ಕೆ ಇದೇ ಪ್ರಥಮ ಬಾರಿಗೆ ರೈಲಿನಲ್ಲಿ ಕಳುಹಿಸಿಕೊಡಲು ಸಿದ್ಧತೆ ಕೈಗೊಳ್ಳಲಾಗಿದೆ.
ಈ ಹಿಂದೆ ಪ್ರಾಣಿಗಳನ್ನು ದೊಡ್ಡ ಟ್ರಕ್ ಅಥವಾ ಲಾರಿ ಮೂಲಕ ಕಳುಹಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಆರೋಗ್ಯದ ದೃಷ್ಟಿಯಿಂದ ಪ್ರಾಣಿಗಳನ್ನು ಅಸ್ಸೋಂನ ಗೌಹಾಟಿಯ ಮೃಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ರವಿಶಂಕರ್ ತಿಳಿಸಿದ್ದಾರೆ. ಎರಡು ವರ್ಷದ ಧನುಶ್ ಹುಲಿ, ಎರಡು ಕಪ್ಪು ಬಕ್ಸ್, ನಾಲ್ಕು ನವಿಲುಗಳು ಕೂಡಾ ರವಾನೆಯಾಗಲಿವೆ. ನಾಳೆ ಬೆಳಗ್ಗೆ 11 ಗಂಟೆಗೆ ಮೈಸೂರಿನಿಂದ ವಿಶೇಷ ರೈಲಿನಲ್ಲಿ ಅಸ್ಸೊಂಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹಾಗೆಯೇ ಗೌಹಾಟಿ ಮೃಗಾಲಯದಿಂದ ಎರಡು ಫಿಲಿಕಾನ್, ಹಿಮಾಲಯನ್ ಕಪ್ಪು ಕರಡಿ, ನಾಲ್ಕು ಕೊಂಬಿನ ಜಿಂಕೆಗಳು ಮೈಸೂರು ಝೂಗೆ ವಿಶೇಷ ರೈಲಿನಲ್ಲಿ ಆಗಮಿಸಲಿವೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ