ಲೋಕಾಯುಕ್ತರಿಗೆ ಚಾಕು ಇರಿತ ಪ್ರಕರಣ: ಆರೋಪಿ ತೇಜ್ರಾಜ್ ಐದು ದಿನ ಪೆÇಲೀಸ್ ವಶಕ್ಕೆ
ಬೆಂಗಳೂರು, ಮಾ.8- ಲೋಕಾಯುಕ್ತ ಕಚೇರಿಗೆ ನುಗ್ಗಿ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೇಜ್ರಾಜ್ ಶರ್ಮಾನನ್ನು ಐದು ದಿನ ಪೆÇಲೀಸ್ ವಶಕ್ಕೆ ನೀಡಲಾಗಿದೆ.
ಆರೋಪಿ ತೇಜ್ರಾಜ್ ಶರ್ಮಾನನ್ನು ವಿಧಾನಸೌಧ ಠಾಣೆ ಪೆÇಲೀಸರು ಇಂದು ಬೆಳಗ್ಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಆಗ ನ್ಯಾಯಾಧೀಶರು ಆರೋಪಿಯನ್ನು ಐದು ದಿನ ಪೆÇಲೀಸ್ ವಶಕ್ಕೆ ನೀಡಿದ್ದಾರೆ.
ನಿನ್ನೆ ಮಧ್ಯಾಹ್ನ 1.45ರ ಸಮಯದಲ್ಲಿ ಲೋಕಾಯುಕ್ತ ಕಚೇರಿಗೆ ಬಂದಿದ್ದ ತೇಜ್ರಾಜ್ ಶರ್ಮಾ, ನ್ಯಾ.ವಿಶ್ವನಾಥ್ ಶೆಟ್ಟಿ ಅವರ ಕೊಠಡಿಗೆ ತೆರಳಿ ತಾನು ನೀಡಿದ್ದ ದೂರುಗಳ ಮರು ತನಿಖೆ ಮಾಡುವಂತೆ ಒತ್ತಾಯಿಸಿದ್ದಾನೆ.
ಈ ವೇಳೆ ವಿಶ್ವನಾಥ್ ಶೆಟ್ಟಿ ಅವರು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರೂ, ಆರೋಪಿ ಶರ್ಮಾ ಇದಕ್ಕೆ ತೃಪ್ತನಾಗದೆ ಮೊದಲೇ ಅಂದುಕೊಂಡಂತೆ ತಾನು ತಂದಿದ್ದ ಚಾಕುವಿನಿಂದ ದಾಳಿ ಮಾಡಿದ್ದಾನೆ.
ಅನಿರೀಕ್ಷಿತ ದಾಳಿಯಿಂದ ಆತಂಕಗೊಂಡ ಲೋಕಾಯುಕ್ತರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಲೋಕಾಯುಕ್ತರ ಕಚೇರಿ ಸಹಾಯಕ ಪಳನಿಸ್ವಾಮಿ, ಕಾನ್ಸ್ಟೆಬಲ್ ಸುಬ್ರಹ್ಮಣ್ಯ ಹಾಗೂ ಲೋಕಾಯುಕ್ತರ ಗನ್ಮ್ಯಾನ್ ಪುರುಷೋತ್ತಮ್ ಅವರುಗಳು ಕೊಠಡಿಗೆ ದೌಡಾಯಿಸಿದ್ದಾರೆ.
ಕುಸಿದು ಬಿದ್ದಿದ್ದ ಲೋಕಾಯುಕ್ತರನ್ನು ಕಂಡ ಸಿಬ್ಬಂದಿ ತಕ್ಷಣ ಲಿಫ್ಟ್ನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇತ್ತ ಕಾನ್ಸ್ಟೆಬಲ್ ಸುಬ್ರಹ್ಮಣ್ಯ ಹಾಗೂ ಗನ್ಮ್ಯಾನ್ ಪುರುಷೋತ್ತಮ್ ಅವರುಗಳು ಆರೋಪಿಯನ್ನು ಹಿಡಿದು ಪೆÇಲೀಸರಿಗೆ ಒಪ್ಪಿಸಿದ್ದರು.