ನಲ್ಲೂರು, ಮಾ.8- ರೈತ ಕೇವಲ ಶ್ರಮಜೀವಿ ಮಾತ್ರ ಅಲ್ಲ. ಆತ ಸೃಜನಾತ್ಮಕ ಪ್ರತಿಭಾವಂತನೂ ಹೌದು. ಇದಕ್ಕೊಂದು ಸ್ಪಷ್ಟ ನಿದರ್ಶನ ಆಂಧ್ರಪ್ರದೇಶದ ನಲ್ಲೂರು ಜಿಲ್ಲೆಯ ಬಂದಕಿಂಡುಪಲ್ಲೆ ಗ್ರಾಮದ ಚೆಂಚುರೆಡ್ಡಿ ಸಾಕ್ಷಿಯಾಗಿದ್ದಾರೆ.
ಹತ್ತು ಎಕರೆಯ ತಮ್ಮ ಜಮೀನಿನಲ್ಲಿ ಬೆಳೆದ ತರಕಾರಿ ಬೆಳೆಗೆ ದೃಷ್ಟಿ ತಾಗಬಾರದು ಎಂದು ಈತ ಬಿಕಿನಿ ಧರಿಸಿರುವ ಸನ್ನಿ ಲಿಯೋನ್ನ ದೊಡ್ಡ ಚಿತ್ರವನ್ನು ಹೊಲದಲ್ಲಿ ಹಾಕಿದ್ದ.
ಈತನ ಈ ಪೆÇೀಸ್ಟರ್ ನೋಡಿ ಗ್ರಾಮಸ್ಥರು ಆತನಿಗೆ ಹಿಡಿಶಾಪ ಹಾಕಿದ್ದರು. ಆದರೆ, ಅದ್ಯಾವುದನ್ನೂ ಲೆಕ್ಕಿಸದೆ ಇದ್ದ ರೆಡ್ಡಿಗೆ ಕಾಕತಾಳೀಯ ಎಂಬಂತೆ ಬಂಪರ್ ಬೆಳೆ ಬಂದಿದೆ.
ಹತ್ತು ಎಕರೆಯ ತನ್ನ ಜಮೀನಿನಲ್ಲಿ ಹಣ್ಣು, ತರಕಾರಿಗಳು ಸಮೃದ್ಧವಾಗಿ ನಳನಳಿಸುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೆಡ್ಡಿ, ಹಿಂದೆಂದಿಗಂತಲೂ ಈ ಬಾರಿ ಉತ್ತಮ ಬೆಳೆ ಲಭಿಸಿದೆ. ನನ್ನ ಜಮೀನಿಗೆ ದೃಷ್ಟಿ ನಿವಾರಿಸಲು ನಾನು ಸನ್ನಿ ಲಿಯೋನ್ ಚಿತ್ರವನ್ನು ಹಾಕಿದ್ದು ಒಳ್ಳೆಯದಾಯಿತು. ಈಗ ನನ್ನ ಬಂಪರ್ ಬೆಳೆ ನೋಡಿ ಇತರೆ ಗ್ರಾಮಸ್ಥರು ಅಸೂಯೆ ಪಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.