ಕೆಎಲ್‍ಇ ಮಹಿಳಾ ಸ್ವಶಕ್ತಿ ಘಟಕದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಬೆಳಗಾವಿ-ಮಾ.8- ಕೆಎಲ್‍ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲಿಕರಣ ಸೆಲ್ ಇಂದು ಕೆಎಲ್‍ಇ ಸೆಂಟನರಿ ಕನ್ವೆನ್ಷನ್ ಸೆಂಟರ್ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನ ಅರ್ಥಪೋರ್ಣವಾಗಿ ಆಚರಿಸಿತು. “ಪ್ರೆಸ್ ಫಾರ್ ಪ್ರೋಗ್ರೆಸ್” ಥಿಮ್ನಿಂದ ನಡೆದ ಈ ಸಮಾರಂಭದಲ್ಲಿ ಸ್ಥಳಿಯ ಮಹಿಳಾ ಸಂಸ್ಥೆಗಳಲ್ಲಿ ಶಕ್ತಿ ತುಂಬುವ ನಿಟ್ಟಿನಲ್ಲಿ ನಡೆದ ಈ ಸಮಾರಂಭದಲ್ಲಿ ವಯಸ್ಕರ ಹಾಗು ಬಡವರ ಬಗ್ಗೆ ಕಾಳಜಿ ವಹಿಸುವ ಮಹಿಳಾ ಮತ್ತು ಮಕ್ಕಳ ಕಲ್ಯಾಣದಿಂದ ಗುರುತಿಸಿಕೊಂಡಿರುವ ಬೆಳಗಾವಿಯ ಸುಮಾರು 30ಕ್ಕು ಅಧಿಕ ನೊಂದಾಯಿತ ಎನಜಿಓ ಗಳನ್ನ ಆಹ್ವಾನಿಸಲಾಗಿತ್ತು. ಎನಜಿಓ ಗಳ ವೃತ್ತಿಪರ ತರಬೇತಿ, ಸಾಮಾಜಿಕ ಸೇವಾ ಕಾರ್ಯಗಳ ಈವೆಂಟ್‍ಗಳು, ಮತ್ತು ಸಾಧನೆಗಳನ್ನ ಸ್ವಶಕ್ತಿ ವೀಕ್ಷಿಸಿತು. ಸಾಮಾಜಿಕ ಸೇವಾ ಚಟುವಟಿಕೆ ಕಾರ್ಯಗಳಲ್ಲಿ ತೊಡಗಿರುವ ಎನ್‍ಜಿಓ ಗಳಿಗೆ ಸಾಧನೆಯ ಪ್ರಮಾಣ ಪತ್ರವನ್ನ ನೀಡಿ ಗೌರವಿಸಲಾಯಿತು.

ಮಕ್ಕಳ ಕಲ್ಯಾಣಕ್ಕಗಿ ಸೇವೆ ಮಾಡಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ ಇತ್ತೀಚೆಗೆ ಪ್ರಶಸ್ತಿಯನ್ನ ಪಡೆದ ಮಹೇಶ್ ಪೌಂಡೇಶನ್ನ ಸಂಸ್ಥಾಪಕ ಮಹೇಶ್ ಜಾಧವ್ ಅವರನ್ನ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಾಮಾಜಿಕ ಸೇವೆಗಳಿಗೆ ದಾನಿಗಳ ಹಾಗು ಎನ್‍ಜಿಓ ಗಳಿಗೆ ಅನುಕೊಲವಾಗುವಂತೆ ಬೆಂಗಳೊರಿನ ಸಹಯೋಗ್ ಫೌಂಡೇಶನ್‍ನ ಅಧ್ಯಕ್ಷ ಅನಿಶ್ ಕುಮಾರ್ ರೋಪಿಸಿರುವಂತೆ ಬೆಂಗಳೊರಿನ ಮೊಬಿಜಿನ್ ಚಿ.ಇ.ಓ ರಾಕೇಶ್ ತೆರಗುಂಡಿ ವಿನ್ಯಾಸಗೊಳಿಸಿರುವ “ಗೇಮ್ ಅಫ್ ಗಿವಿಂಗ್” ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ಕೆಎಲ್‍ಇ ಸ್ವಶಕ್ತಿಯ ಅಧ್ಯಕ್ಷರಾದ ಆಶಾತಾಯಿ ಕೋರೆ, ಪ್ರೀತಿ ಕೋರೆ ದೊಡವಾಡ, ಸೊನಾಲ್ ಜೋಷಿ ಮುಂತಾದ ಗಣ್ಯರು ಹಾಗು ಸದಸ್ಯರು ಉಪಸ್ಥೊಇತರಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ