ಇಸ್ಲಾಮಾಬಾದ್, ಮಾ.7-ತನ್ನ ವಾಯು ವ್ಯಾಪ್ತಿ ಪ್ರವೇಶಿಸಿದ ಭಾರತದ ಬೇಹುಗಾರಿಕೆ ಡ್ರೋಣ್ನನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಸೇನೆ ಹೇಳಿಕೊಂಡಿದೆ.
ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ದಾಟಿ ತನ್ನ ವಾಯು ಪ್ರದೇಶವಾದ ಚಿರಿಕೋಟ್ ವಲಯಕ್ಕೆ ನುಗ್ಗಿದ ಗೂಢಚಾರಿಕೆ ಹಾರುವ ಯಂತ್ರವನ್ನು ನಿನ್ನೆ ರಾತ್ರಿ ಯೋಧರು ಹೊಡೆದುರುಳಿಸಿದ್ದಾರೆ ಎಂದು ಪಾಕಿಸ್ತಾನ ಮಿಲಿಟರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನಿ ಸೇನಾಪಡೆಯಿಂದ ಹೊಡೆದುರುಳಿಸಿರುವ ನಾಲ್ಕನೇ ಡ್ರೋಣ್ ಇದಾಗಿದೆ ಎಂದು ಅದು ಹೇಳಿಕೊಂಡಿದೆ.